Saturday, May 4, 2024
spot_imgspot_img
spot_imgspot_img

ಮಂಗಳೂರು: ಸ್ನಾನಕ್ಕೆಂದು ತೆರಳಿದ ಯುವಕ ಸ್ನಾನ ಗೃಹದಲ್ಲೇ ಶವವಾಗಿ ಪತ್ತೆ!

- Advertisement -G L Acharya panikkar
- Advertisement -

ಫರಂಗಿಪೇಟೆ: ಸ್ನಾನ ಮಾಡುತ್ತಿದ್ದ ವೇಳೆ ಯುವಕನೋರ್ವ ಗ್ಯಾಸ್ ಗೀಝರ್ ನಿಂದ ಹೊರಬಂದ ವಿಷಾನಿಲ ಸೇವಿಸಿ ಸಾವನ್ನಪ್ಪಿದ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ.

ಮೃತ ಯುವಕ ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23).

ಮೃತ ಇಜಾಝ್ ಅಹ್ಮದ್ ಸ್ನಾನದ ಕೊಠಡಿಯ ಒಳಗಿದ್ದ ಗ್ಯಾಸ್ ಗೀಸರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗೀಝರ್ ನಿಂದ ಹೊರ ಬಂದ ಕಾರ್ಬನ್ ಮೊನಾಕ್ಸೈಡ್ ಸೇವಿಸಿ ಮೃತಪಟ್ಟಿದ್ದಾರೆ. ಸ್ನಾನಕ್ಕೆಂದು ತೆರಳಿದ್ದ ಇಜಾಝ್ ಅಹ್ಮದ್ ಒಂದು ಗಂಟೆ ಹೊತ್ತಾದರೂ ಹೊರ ಬಾರದೇ ಇದ್ದುದರಿಂದ ಮನೆಯವರು ಬಾಗಿಲು ಒಡೆದು ನೋಡಿದಾಗ ಆತ ಸ್ನಾನದ ಕೊಠಡಿಯಲ್ಲಿ ಬಿದ್ದಿದ್ದನು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಆತ ಮೃತಪಟ್ಟಿದ್ದನು.

- Advertisement -

Related news

error: Content is protected !!