Thursday, April 18, 2024
spot_imgspot_img
spot_imgspot_img

ಮಂಗಳೂರು: ಹಿಂದೂ ಕಾರ್ಯಕರ್ತನಿಗೆ ಸ್ಯಾಟಲೈಟ್‌ ಕರೆ ಮೂಲಕ ಜೀವ ಬೆದರಿಕೆ; ನೀನು ಸೇರಿ ಮೂವರಿಗೆ ಸ್ಕೆಚ್ ಹಾಕಿದ್ದೇವೆ…! ದೂರು ದಾಖಲು

- Advertisement -G L Acharya panikkar
- Advertisement -

ಮಂಗಳೂರು: ಮಸೂದ್‌, ಪ್ರವೀಣ್ ನೆಟ್ಟಾರು, ಫಾಝಿಲ್ ಹತ್ಯೆ ಬಳಿಕ ಕರಾವಳಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸಿ ಕೋಮುಗಲಭೆಯಾಗದಂತೆ ಎಚ್ಚರ ವಹಿಸಿತ್ತು. ತಕ್ಕ ಮಟ್ಟಿಗೆ ತಣ್ಣಗಾಗುತ್ತಿದ್ದ ದಕ್ಷಿಣ ಕನ್ನಡಲ್ಲಿ ಮತ್ತೆ ಆತಂಕದ ಛಾಯೆ ನಿರ್ಮಾಣವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಹಿಂದು ಸಂಘಟನೆಯ ಕಾರ್ಯಕರ್ತರನ್ನು ಹಿಂಬಾಲಿಸುವುದು, ಇಂಟರ್ನೆಟ್ ಕರೆ ಮಾಡಿ ಜೀವ ಬೆದರಿಕೆ ಒಡ್ಡುವ ಕೃತ್ಯಗಳು ಮರುಕಳಿಸುತ್ತಿವೆ.

ಈ ಬಗ್ಗೆ ಹಿಂದು ಸಂಘಟನೆ ಕಾರ್ಯಕರ್ತರೊಬ್ಬರು ತನಗೆ ಬಂದ ಬೆದರಿಕೆ ಕರೆ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಭಾನುವಾರ ರಾತ್ರಿ 10.30ಕ್ಕೆ ಪಂಪ್‌ವೆಲ್‌ ನಿಂದ ಕಾರಿನಲ್ಲಿ ಬಿಕರ್ನಕಟ್ಟೆಯ ತನ್ನ ಮನೆಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಇಬ್ಬರ ಅಪರಿಚಿತ ಯುವಕರು ಹಿಂಬಾಲಿಸಿದ್ದಾರೆ. ಮನೆಗೆ ಮುಟ್ಟುವಷ್ಟರಲ್ಲಿ ಇಂಟರ್ನೆಟ್ ಕರೆ ಬಂದಿದ್ದು ನೀನು ಈ ಬಾರಿ ಬಚಾವಾಗಿದ್ದೀಯಾ.. ನಾವು ಬಿಡೋದಿಲ್ಲ. ನೀನು ಸೇರಿ ಮೂವರಿಗೆ ಸ್ಕೆಚ್ ಹಾಕಿದ್ದೇವೆ. ಇವತ್ತಲ್ಲ ನಾಳೆ, ತೆಗೆದೇ ಬಿಡುತ್ತೇವೆ ಎಂದು ತುಳು ಭಾಷೆಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರು ಜೀವ ಬೆದರಿಕೆ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಬಳ್ಳಾಲ್ ಬಾಗಿನ ಕಾರ್ಯಕರ್ತನಿಗೂ ಇದೇ ರೀತಿ ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿ, ತುಳು ಭಾಷೆಯಲ್ಲಿ ನಿಂದಿಸಿದ್ದಲ್ಲದೆ, ನಿನ್ನನ್ನು ತೆಗೆಯದೇ ಬಿಡಲ್ಲ ಎಂದು ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಹಾಕಿದ್ದ ಆಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.

- Advertisement -

Related news

error: Content is protected !!