Friday, August 7, 2026
spot_imgspot_img
spot_imgspot_img

ಮಂಗಳೂರು: ಹಿರಿಯ ಉಪ ನೋಂದಾಣಾಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ; ಉಪನೋಂದಾಣಾಧಿಕಾರಿಯಾಗಿ ರಘುರಾಮ್‌ ಪ್ರಸಾದ್ ನೇಮಕ

- Advertisement -
- Advertisement -

ಕರ್ನಾಟಕ ಸರ್ಕಾರವು ವಿವಿಧ ಜಿಲ್ಲೆಗಳ ಹಿರಿಯ ಉಪ ನೋಂದಾಣಾಧಿಕಾರಿ \ ಉಪ ನೋಂದಾಣಾಧಿಕಾರಿಗಳನ್ನು ವಿವಿಧ ಹುದ್ದೆಗೆ ನೇಮಕ ಮಾಡಿ ವರ್ಗಾವಣೆಗೊಳಿಸಿದ್ದಾರೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ನಗರ ಉಪನೋಂದಣಿ ಕಛೇರಿಯಲ್ಲಿ ಹಿರಿಯ ಉಪನೋಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಪಿ ಬಿ ಕವಿತ ಅವರನ್ನು ಕಾವೇರಿ ಉಪನೋಂದಣಿ ಕಛೇರಿಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಕವಿತಾ ಅವರ ತೆರವಾದ ಸ್ಥಾನಕ್ಕೆ ಮೂಡಬಿದ್ರೆ ಉಪನೋಂದಣಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಉಪನೋಂದಾಣಾಧಿಕಾರಿ ರಘುರಾಮ್‌ ಪ್ರಸಾದ್ ವರ್ಗಾವಣೆಗೊಂಡಿದ್ದಾರೆ.

- Advertisement -

Related news

error: Content is protected !!