Thursday, April 25, 2024
spot_imgspot_img
spot_imgspot_img

ಮಂಗಳೂರು: 13ನೇ ದಿನಕ್ಕೆ ಕಾಲಿಟ್ಟ ಟೋಲ್‌ಗೇಟ್ ವಿರುದ್ದದ ವಿಶೇಷ ಪ್ರತಿಭಟನೆ; ಭಿಕ್ಷಾಟನೆ ಮೂಲಕ ಗಮನ ಸೆಳೆದ ಆಸಿಫ್ ಆಪತ್ಬಾಂಧವ..!!

- Advertisement -G L Acharya panikkar
- Advertisement -
vtv vitla
vtv vitla

ಮಂಗಳೂರು: ಸುರತ್ಕಲ್‌ನ ಟೋಲ್‌ಗೇಟ್‌ ವಿರುದ್ಧ ಆಪತ್ಬಾಂಧವ ಆಸಿಫ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯು 12ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ನಿನ್ನೆ ಸಂಜೆ ಆಸಿಫ್‌ರವರು ಭಿಕ್ಷಾಟನೆ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಗುರುವಾರ ಪ್ರತಿಭಟನಾಕಾರ ಜೊತೆ ಮಾತುಕತೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಧರಣಿಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದ್ದರೂ ಕೂಡ ನಿನ್ನೆ ಭಿಕ್ಷಾಟನೆ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಧರಣಿಗೆ ನೇತೃತ್ವ ನೀಡಿರುವ ಆಸಿಫ್ ಆಪತ್ಬಾಂಧವ ಭಿಕ್ಷುಕರ ವೇಷ ಧರಿಸಿ ಸಾರ್ವಜನಿಕರ ಮುಂದೆ ಭಿಕ್ಷಾಟನೆ ಮಾಡಿ ಹೆದ್ದಾರಿಯ ಗುತ್ತಿಗೆದಾರರಿಗಾಗಿ ನಿಧಿ ಸಂಗ್ರಹಿಸುವ ಮೂಲಕ ಗಮನ ಸೆಳೆದರು

ಈ ಬಗ್ಗೆ ಪ್ರತಿಕ್ರಿಯಿಸಿದ ಆಸಿಫ್ ಆಪತ್ಬಾಂಧವ ನಾನಿಂದು ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಗುತ್ತಿಗೆದಾರರ ಸಂಸ್ಥೆಗಾಗಿ ನಿಧಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತೇನೆ. ಅದೂ ಸಾಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಸಂಘ-ಸಂಸ್ಥೆಗಳ ಜೊತೆಗೂಡಿ ರಾಜ್ಯಾದ್ಯಂತ ಭಿಕ್ಷಾಟನೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!