Thursday, July 23, 2026
spot_imgspot_img
spot_imgspot_img

ಮಂಗಳೂರು: 3 ಮಕ್ಕಳೊಂದಿಗೆ ತಾಯಿ ನಾಪತ್ತೆ: ಅನೈತಿಕ ಸಂಬಂಧದ ಶಂಕೆ

- Advertisement -
- Advertisement -

ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಈ ಬಗ್ಗೆ ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ ವಾಸವಿರುವ ಯು.ಕೆ.ಸಲೀಂ ಎಂಬವರ ಪತ್ನಿ ಜೀನತ್ (34) ಅವರ ಮಕ್ಕಳಾದ ಮೊಯ್ದೀನ್ ಅಬ್ದುಲ್ ಸಮದ್ (11), ನೆಬಿಸಾ ಸಫ್ನಾಜ್ (10) ಮತ್ತು ಮೊಹಮ್ಮದ್ ತೆಹನಾಜ್ (7) ನಾಪತ್ತೆಯಾದವರು.

ದೂರಿನ ಪ್ರಕಾರ, ಜೀನತ್ ತನ್ನ ಮನೆಯಿಂದ ಮಾರ್ಚ್ 31 ರಂದು ಬೆಳಿಗ್ಗೆ 10 ಗಂಟೆಗೆ ಕೃಷ್ಣಾಪುರ ಬದ್ರಿಯಾ ಶಾಲೆಗೆ ಹೋಗಿ ತನ್ನ ಮೂರು ಮಕ್ಕಳನ್ನು ಕರೆದುಕೊಂಡು ನಂತರ ನಾಪತ್ತೆಯಾಗಿದ್ದಾರೆ. ಜೀನತ್ ಅವರ ಪತಿ ಸಲೀಂ ಅವರು ತಮ್ಮ ದೂರಿನಲ್ಲಿ, ಜೀನತ್ ಕಳೆದ ಎಂಟು ಒಂಬತ್ತು ತಿಂಗಳಿಂದ ಅನೈತಿಕ ಸಂಬಂಧ ಹೊಂದಿದ್ದು ನೆರೆಹೊರೆಯವನೊಂದಿಗೆ ಹೋಗಿರಬೇಕು ಎಂದು ಶಂಕಿಸಿದ್ದಾರೆ.

- Advertisement -

Related news

error: Content is protected !!