Friday, May 3, 2024
spot_imgspot_img
spot_imgspot_img

ಮಂಗಳೂರು: Actually I am Gay ಎಂದು ನಿಶ್ಚಿತಾರ್ಥವಾಗಬೇಕಿದ್ದ ಯುವತಿಗೆ ಮೆಸೇಜ್ ಕಳುಹಿಸಿದ ಯುವಕ ಪೊಲೀಸರ ವಶಕ್ಕೆ!

- Advertisement -G L Acharya panikkar
- Advertisement -

ಮಂಗಳೂರು: ತಾನು ನಿಶ್ಚಿತಾರ್ಥವಾಗಬೇಕಾಗಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದಡಿ ಯುವತಿ ನೀಡಿದ ದೂರಿನ ಆಧಾರದಲ್ಲಿ ಯುವಕನೋರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಆರೋಪಿ ನಗರದ ಯುವತಿಯೊಬ್ಬಳ ಜೊತೆ ಮದುವೆಗೆ ಮಾತುಕತೆ ನಡೆದಿತ್ತು. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಇದರ ಪ್ರಕ್ರಿಯೆ ನಡೆಯುತ್ತಿತ್ತು. ಕೆಲ ದಿನಗಳ ಬಳಿಕ ಯುವತಿಯ ನಂಬರ್ ಪಡೆದುಕೊಂಡ ಶ್ರೀನಿವಾಸ್ ಮದುವೆಯಾಗಲಿದ್ದ ಯುವತಿಯ ಮೊಬೈಲ್ ನಂಬರ್ ಪಡೆದು ಯುವತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾ, ತಾನೊಬ್ಬ ಸಲಿಂಗಕಾಮಿ ಎಂದು ಹೇಳಿ ಯುವತಿಯನ್ನು ಗಾಬರಿಗೊಳಿಸಿದ್ದಾನೆ.

ಅದಲ್ಲದೆ, ಮಾತುಕತೆಯ ನಡುವೆ, Then I need to find another wife for 10 pm duty ಎಂದು ಮೆಸೇಜ್ ಹಾಕಿದ್ದ. ವಿಚಿತ್ರ ಸಂದೇ ಶಗಳನ್ನು ಕಳುಹಿಸುತ್ತಿದ್ದ ಕಾರಣ, ಆಕೆಯ ಕುಟುಂಬಸ್ಥರು ನಿಶ್ಚಿತಾರ್ಥ ಕಾರ್ಯವನ್ನು ಏನೋ ಕಾರಣ ನೀಡಿ ಮುಂದಕ್ಕೆ ಹಾಕಿದ್ದರು. ಇದರ ನಡುವೆಯೂ , ಆತ ಯುವತಿಗೆ ಇಂತಹದ್ದೇ ಅಸಂಬದ್ಧ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ.

Actually I am Gay.. But its ok, well work out. Something well, run the show ಎಂದು ಮೆಸೇಜ್ ಮಾಡಿದ್ದಾನೆ. ಯುವಕನ ಈ ರೀತಿಯ ವರ್ತನೆಯಿಂದ ಮತ್ತಷ್ಟು ನೊಂದುಕೊಂಡ ಯುವತಿ ನಗರದ ಸೈಬರ್ ಠಾಣೆಗೆ ಯುವಕನ ವಿರುದ್ಧ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!