Friday, April 26, 2024
spot_imgspot_img
spot_imgspot_img

ಮಂಗಳೂರು: CFI ಹುಡುಗಿಯರಿಂದ ಅನುಮತಿ ಪಡೆಯದೇ ಪ್ರತಿಭಟನಾ ಜಾಥಾ.! – ಕಮಿಷನರ್‍ ಖಡಕ್ ಎಚ್ಚರಿಕೆಗೆ ಜಾಗ ಖಾಲಿ ಮಾಡಿದ್ರು..! ವಿವಾದಾತ್ಮಕ ಪ್ರತಿಕೃತಿ ಪ್ರದರ್ಶನ

- Advertisement -G L Acharya panikkar
- Advertisement -

ಮಂಗಳೂರು: ಸಿಎಫೈಐ (CFI ) ಗರ್ಲ್ಸ್‌ ಕಾನ್ಫರೆನ್ಸ್‌ ಗೆ ಅನುಮತಿ ನಿರಾಕರಿಸಿದ್ದಕ್ಕೆ ಮಂಗಳೂರಿನಲ್ಲಿ ವಿದ್ಯಾರ್ಥಿನಿಯರಿಂದ ಧರಣಿ ನಡೆಸಿದ್ದಾರೆ. ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪ್ರತಿಭಟನೆ ವಿರುದ್ಧ ಕಮಿಷನರ್‌ ಎಚ್ಚರಿಕೆ ನೀಡಿದ ಬಳಿಕವೂ ಮಿಲಾಗ್ರಿಸ್‌ ಬಳಿ ಪೊಲೀಸ್‌ ಕಮಿಷನರ್‌ ಮತ್ತು ಸಿಎಫೈಐ ಮುಖಂಡರು ವಾಗ್ವಾದ ನಡೆಸಿದ ಘಟನೆ ನಡೆದಿದೆ. ಪ್ರತಿಭಟನೆಯ ಪಟ್ಟು ಹಿಡಿದು ಸಿಎಫೈಐ ಮುಖಂಡರು ಮಂಗಳೂರಿನ ಮಿಲಾಗ್ರಿಸ್‌ ಬಳಿ ಜಾಗ ಖಾಲಿ ಮಾಡಿದರು.

ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಬಳಿಯ ಮಸ್ಕಿದ್ದೂರುನ್ನುಲ್ ಮಸೀದಿ ಬಳಿ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಹಿಳೆಯರು ಜಮಾವಣೆಗೊಂಡು ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದರು. ಆದರೆ ಈ ವೇಳೆ ಪೊಲೀಸರು ಬ್ಯಾರಿ ಕೇಡ್ ಗಳನ್ನು ಇಟ್ಟು ಯಾವುದೇ ಕಾರಣಕ್ಕೂ ಜಾಥಾ ನಡೆಸುವಂತಿಲ್ಲ ಎಂದು ಸೂಚನೆ ನೀಡಿದರು. ಈ ವೇಳೆ ವಿದ್ಯಾರ್ಥಿನಿಯರು ಮತ್ತು ಪೊಲೀಸರ ನಡುವೆ ಮಾತಿಕ ಚಕಮಕಿ ನಡೆಯಿತು.

ಪುರಭವನದಲ್ಲಿ ಪೊಲೀಸರು CFI ಸಮಾವೇಶ ನಡೆಸಲು ಅನುಮತಿ ನೀಡಲಾಗಿದೆ. ಪೊಲೀಸರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಸ್ಸ್‌ ಹತ್ತಿದ ವಿದ್ಯಾರ್ಥಿನಿಯರು ಪುರಭವನದತ್ತ ಮುಸ್ಲಿಂವಿದ್ಯಾರ್ಥಿನಿಯರು ತೆರಳಿದ್ದಾರೆ.
CFI ರ್‍ಯಾಲಿ ಅವಕಾಶ ನಿರಾಕರಿಸಿದ್ದ ಮಂಗಳೂರು ಪೊಲೀಸರು ಪುರಭವನ ಬಳಿ ಸಮಾವೇಶ ನಡೆಸಲು ಅನುಮತಿ ನೀಡಲಾಗಿತ್ತು. ಆದರೂ ಯುವತಿಯರ ದಾರಿ ತಪ್ಪಿಸುತ್ತಿದ್ದೀರಾ? ಎಂದು ಸಿಎಫೈಐ ಮುಖಂಡರಿಗೆ ಕಮಿಷನರ್‌ ಎನ್‌ ಶಶಿಕುಮಾರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವಾದಾತ್ಮಕ ಪ್ರತಿಕೃತಿ ಪ್ರದರ್ಶನ
ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ಮೋದಿ ಮುಖವಾಡ ಧರಿಸಿದ ಇಬ್ಬರು ವ್ಯಕ್ತಿಗಳು ಬುರ್ಖಾ ಧರಿಸಿದ ಮಹಿಳೆಯ ಅಕೃತಿಯನ್ನು ಸರಪಳಿ ಬಿಗಿದು ಹಿಡಿದುಕೊಂಡಿರುವ ರೂಪಕವೊಂದನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು. ಎಂಡ್ ಸಾಫ್ರನೈಸೇಷನ್ ( ಕೇಸರಿಕರಣ) ಅಂತ್ಯಗೊಳಿಸಿ ಎಂಬ ಭಿತ್ತಿ ಪತ್ರ, ಟಿಪ್ಪು ಹಾಗೂ ಅದರಲ್ಲಿ ಕೆಲ ಮುಖಂಡರುಗಳ ಚಿತ್ರ ಪ್ರದರ್ಶಿಸಿದರು.

- Advertisement -

Related news

error: Content is protected !!