Monday, June 30, 2025
spot_imgspot_img
spot_imgspot_img

ಮಂಜೇಶ್ವರ: ಗಾಂಜಾ, ಮಾದಕ ವಸ್ತು ಸಹಿತ ಮೂವರು ಆರೋಪಿಗಳ ಬಂಧನ..!

- Advertisement -
- Advertisement -

ಕಾಸರಗೋಡು: ಗಾಂಜಾ ಮತ್ತು ಎಂಡಿಎಂಎ ಮಾದಕ ವಸ್ತು ಸಹಿತ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರು ಮತ್ತು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.

ನೀಲೇಶ್ವರ ತೈಕಡಪ್ಪುರದ ಮಂಶೀರ್(33), ಮಂಜೇಶ್ವರ ಬಡಾಜೆಯ ಅಭಿಲಾಷ್(25) ಮತ್ತು ಉಪ್ಪಳ ಹಿದಾಯತ್ ನಗರದ ಮುಹಮ್ಮದ್ ಸುಹೈಲ್(25) ಬಂಧಿತರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರನ್ನು ತಡೆದು ನಿಲ್ಲಿಸಿ ಪರಿ ಶೀಲನೆ ನಡೆಸಿದಾಗ 4. 29 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತುವನ್ನು ಪತ್ತೆ ಯಾಗಿದ್ದು, ಕಾರಲ್ಲಿದ್ದ ಮಂಶೀರ್ ಮತ್ತು ಅಭಿಲಾಷ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

astr

ಇನ್ನೊಂದು ಪ್ರಕರಣದಲ್ಲಿ ಉಪ್ಪಳ ಬಸ್ಸು ನಿಲ್ದಾಣ ಪರಿಸರದಿಂದ ಸ್ಕೂಟರ್ ನ್ನು ತಡೆದು ತಪಾಸಣೆ ನಡೆಸಿದಾಗ 375 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಮುಹಮ್ಮದ್ ಸುಹೈಲ್ ಎಂಬಾತನನ್ನು ಬಂಧಿ ಸಲಾಗಿದೆ.

- Advertisement -

Related news

error: Content is protected !!