Saturday, July 25, 2026
spot_imgspot_img
spot_imgspot_img

ಮಂಜೇಶ್ವರ: ಸಂಬಂಧಿಯೋರ್ವರ ಅಂತ್ಯ ಕ್ರಿಯೆ ಮುಗಿಸಿ ತೆರಳುವ ವೇಳೆ ಬೈಕ್ ಸ್ಕಿಡ್; ಸವಾರ ಸಾವು, ಸಹ ಸವಾರ ಗಂಭೀರ

- Advertisement -
- Advertisement -

ಮಂಜೇಶ್ವರ: ಬೈಕ್ ಮಗುಚಿ ಬಿದ್ದು ಸವಾರ ಮೃತಪಟ್ಟ ಘಟನೆ ಕುಂಬಳೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಬಳಿ ಶುಕ್ರವಾರ ನಡೆದಿದೆ. ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ.

vtv vitla
vtv vitla

ಕುಂಬಳೆ ಕೊಯಿಪಾಡಿ ಕಡಪ್ಪುರದ ಮುಹಮ್ಮದ್ ಹನೀಫ್ ( 45) ಮೃತಪಟ್ಟವರು. ಸಹ ಸವಾರರಾಗಿದ್ದ ಸಿರಾಜ್ ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ಸಂಬಂಧಿಕರೋರ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆಗೆ ಹನೀಫ್ ಮೃತಪಟ್ಟರು.

ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!