


ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ 55ನೇ ವರ್ಷದ ವಿಟ್ಲ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಅವರು ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಿದರು.
ಈ ಬಾರಿಯ ಶಾರದೋತ್ಸವವು ಅಕ್ಟೋಬರ್ 10 ಶುಕ್ರವಾರದಿಂದ ಅಕ್ಟೋಬರ್ 20 ಮಂಗಳವಾರದವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ತುಳು ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ನಿಡ್ಯ, ಗೌರವಾಧ್ಯಕ್ಷರಾದ ಎಂ. ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಎ. ರಾಘವೇಂದ್ರ ಪೈ, ಕೋಶಾಧಿಕಾರಿ ಕೊಪ್ಪ ಕೃಷ್ಣ ಪ್ರಸಾದ್ ಶೆಣೈ, ಉಪಾಧ್ಯಕ್ಷರಾದ ಭಾಸ್ಕರ ರೈ, ನಾಗೇಶ್ ಬಸವನಗುಡಿ, ಜತೆ ಕಾರ್ಯದರ್ಶಿಗಳಾದ ಸುದರ್ಶನ ಎನ್.ಕೆ., ಎಂ. ಶ್ರೀನಿವಾಸ್ ನಾಯಕ್, ಸಹ ಕೋಶಾಧಿಕಾರಿಗಳಾದ ಅನಂತ ಪ್ರಸಾದ್, ಅಭಿಷೇಕ್ ಪೈ ಪಿ., ಸದಸ್ಯರಾದ ನಿತ್ಯಾನಂದ ನಾಯಕ್, ಅಶೋಕ್ ಶೆಟ್ಟಿ, ಗೋಕುಲ್ ದಾಸ್ ಶೆಣೈ, ಮಂಗೇಶ್ ಭಟ್ ವಿಟ್ಲ, ಮೋನಪ್ಪ ಗೌಡ, ಸುದರ್ಶನ್ ಪಡಿಯಾರ್, ರಾಮದಾಸ್ ಶೆಣೈ, ರವಿವರ್ಮ, ಜಯರಾಮ ಬಲ್ಲಾಳ, ಅಶೋಕ ವಿಟ್ಲ, ಮೋಹನ್ ಕಟ್ಟೆ, ವಿಘ್ನೇಶ್ ಕಾಮತ್, ಸುರೇಶ್ ಬನಾರಿ, ರಾಜೇಶ್ ಆರ್.ಕೆ. ವಿಟ್ಲ, ಕೆ. ಗೋಪಾಲಕೃಷ್ಣ ಶೆಟ್ಟಿ, ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.








