Thursday, March 28, 2024
spot_imgspot_img
spot_imgspot_img

ಮಂದಿರಗಳಲ್ಲಿ ಸುಪ್ರಭಾತ ಅಭಿಯಾನ ಹಿಂಪಡೆದ ಶ್ರೀರಾಮಸೇನೆ

- Advertisement -G L Acharya panikkar
- Advertisement -

ಧಾರವಾಡ: ಮಸೀದಿಗಳಲ್ಲಿ ಅನಧಿಕೃತ ಧ್ವನಿವರ್ಧಕ ಬಳಸಿ ಆಜಾನ್ ಕೂಗುವುದರ ವಿರುದ್ದ ಶ್ರೀರಾಮಸೇನೆ ಹಮ್ಮಿಕೊಂಡಿದ್ದ ಮಂದಿರಗಳಲ್ಲಿ ಸುಪ್ರಭಾತ ಅಭಿಯಾನವನ್ನು ಸಂಘಟನೆಯು ಹಿಂಪಡೆದುಕೊಂಡಿದೆ.

ಈ ಕುರಿತು ಧಾರವಾಡದಲ್ಲಿ ಹೇಳಿಕೆ ನೀಡಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸದ್ಯ ಅನಧಿಕೃತ ಮೈಕ್ ತೆರವು ಸಂಬಂಧ ಸರ್ಕಾರ ಗಡುವು ನೀಡಿ ಅಧಿಸೂಚನೆ ಹೊರಡಿಸಿದೆ. ಈ ಕಾರಣದಿಂದಾಗಿ ಸುಪ್ರಭಾತ ಅಭಿಯಾನವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

vtv vitla
vtv vitla

ಅನಧಿಕೃತ ಮೈಕ್ ಅಳವಡಿಸಿದವರಿಗೆ ಅದನ್ನು ತೆರವು ಮಾಡಲು ಗಡುವು ವಿಧಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ತಡವಾಗಿಯಾದರೂ ಸರ್ಕಾರದಿಂದ ಯೋಗ್ಯ ನಿರ್ಣಯ ಹೊರ ಬಿದ್ದಿದೆ. ಅಲ್ಲದೆ, ಮೈಕ್ ಅಳವಡಿಕೆಗೆ ಡಿವೈಎಸ್‌ಪಿ, ಎಸಿಪಿ, ಪೊಲೀಸ್ ಆಯುಕ್ತರ ಮಟ್ಟದಲ್ಲಿ ಅನುಮತಿ ಅಗತ್ಯ ಎಂದಿರುವುದು ಸ್ವಾಗತಾರ್ಹ. ಈ ಎಲ್ಲಾ ಬೆಳವಣಿಗೆ ಕಾರಣದಿಂದ ಸುಪ್ರಭಾತ ಅಭಿಯಾನ ಹಿಂಪಡೆಯಲಾಗಿದೆ. ಆದರೆ 15 ದಿನಗಳ ನಂತರದ ಬೆಳವಣಿಗೆ ನೋಡಿ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದರು.

- Advertisement -

Related news

error: Content is protected !!