Friday, June 19, 2026
spot_imgspot_img
spot_imgspot_img

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಎದೆಗೆ ಇರಿದು ಕೊಲೆ

- Advertisement -
- Advertisement -

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ವ್ಯಕ್ತಿಯ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ರಥಬೀದಿಯ ವೀರವೆಂಕಟೇಶ ಅಪಾರ್ಟ್’ಮೆಂಟ್ ನಲ್ಲಿ ಸಂಭವಿಸಿದೆ. ಚೂರಿಯಿಂದ ಎದೆಗೆ ಇರಿದು ವಿನಾಯಕ್ ಕಾಮತ್(44) ಕೊಲೆ ಮಾಡಲಾಗಿದೆ.

ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿದ್ದಕ್ಕೆ ಗಲಾಟೆ ಶುರುವಾಗಿದ್ದು ಅದೇ ಅಪಾರ್ಟ್ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಪುತ್ರ ಅವಿನಾಶ್ ಕಿಣಿ ವಾಗ್ವಾದ ವೇಳೆ ವಿನಾಯಕ್ ಕಾಮತ್ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಆರೋಪಿಗಳು ಕೃತ್ಯ ಫ್ಲಾಟ್’ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿಯನ್ನು ಪೊಲೀಸರು ಬಂಧಿಸಿದ್ದು ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!