Saturday, April 27, 2024
spot_imgspot_img
spot_imgspot_img

ಮಡಿಕೇರಿ: ವೇಗವಾಗಿ ಬಂದ ಸ್ಕೂಟರ್‍ ಡಿಕ್ಕಿ; ರಸ್ತೆ ಬದಿ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಬಲಿ

- Advertisement -G L Acharya panikkar
- Advertisement -
vtv vitla

ಮಡಿಕೇರಿ: ತಾಲೂಕಿನ ಮೇಕೇರಿ ಗ್ರಾಮದಲ್ಲಿ ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ 5 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಕೂಟರ್ ಅಪಘಾತದ ವಿಡಿಯೊ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೂರ್ನಾಡು ಕಡೆಯಿಂದ ವೇಗವಾಗಿ ಬರುತ್ತಿದ್ದ ಸ್ಕೂಟಿಯು ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಅಸ್ಸಾಂ ಮೂಲದ 5 ವರ್ಷದ ಮಗು ಇಳಿಜಾ ಕುಟುಮ್ ಮೃತಪಟ್ಟ . ಈಕೆ ಅಸ್ಮಾ ಕುತುಮ್, ಇದ್ರಿಸ್ ಅಲಿ ದಂಪತಿಯ ಪುತ್ರಿಯಾಗಿದ್ದಾಳೆ.

ರಸ್ತೆ ಬದಿ ಆಟವಾಡುತ್ತಿದ್ದ ಇಳಿಜಾಳಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಆದರೆ, ರಸ್ತೆ ಬದಿಯೇ ಡಿಕ್ಕಿ ಹೊಡೆದಿದೆಯೇ? ಅಥವಾ ರಸ್ತೆಗೆ ಅಡ್ಡಲಾಗಿ ಇಳಿಜಾ ಬಂದಿದ್ದಾಳೆಯೇ ಎಂಬುದು ತಿಳಿದು ಬಂದಿಲ್ಲ. ಸ್ಕೂಟರ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!