Friday, June 5, 2026
spot_imgspot_img
spot_imgspot_img

ಮಣಿಪಾಲ ಠಾಣೆಯ ಹೆಡ್ ಕಾನ್ಸ್‌ಟೇಬಲ್ ನಿಧನ

- Advertisement -
- Advertisement -

ಮಣಿಪಾಲ: ಅನಾರೋಗ್ಯ ಕಾರಣದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ನಡೆದಿದೆ.

ಕೋಟ ಹಂಗಾರಕಟ್ಟೆಯ ನಿವಾಸಿ ಶಂಕರ (50) ನಿಧನರಾದ ವ್ಯಕ್ತಿ. ಶಂಕರ ಅವರು ಅವಿವಾಹಿತರಾಗಿದ್ದು,ಇವರು ಉಡುಪಿ, ಬ್ರಹ್ಮಾವರ, ಕುಂದಾಪುರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಇದ್ದು, ಶಂಕರ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ದೇಹದ ಸ್ಥಿತಿ ತೀವ್ರ ಹದಗೆಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದಾರೆ. ಮೃತರು ತನ್ನ ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!