Friday, May 3, 2024
spot_imgspot_img
spot_imgspot_img

ಮದುವೆಗಳಲ್ಲಿ ಓಪನ್ ಬಾರ್‌ಗೆ ಅನುಮತಿ ನೀಡಿ ; ಚುನಾವಣಾ ಆಯೋಗಕ್ಕೆ ಮನವಿ

- Advertisement -G L Acharya panikkar
- Advertisement -
vtv vitla

ಜನರು ಮದುವೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣೆ ಆಯೋಗದ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಮದುವೆ ಸಮಾರಂಭ ಇಟ್ಟುಕೊಂಡವರು ಕಂಗಾಲಾಗಿದ್ದಾರೆ.

ಕೊಡಗಿನಲ್ಲಿ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಇದೀಗ ಮದುವೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆಗಳನ್ನು ಮಾಡಬಾರದು ಎಂದು ಅಬಕಾರಿ ಇಲಾಖೆ ಆದೇಶ ಹೊರಡಿಸಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟು ಸಮಯ ಚುನಾವಣೆಗಳಲ್ಲಿ ಈ ರೀತಿಯ ಮಾನದಂಡಗಳು ಹಾಕಿರಲ್ಲಿಲ್ಲ. ಆದರೆ ಈ ಬಾರಿ ಮದುವೆ ಕಾರ್ಯಕ್ರಮಗಳಿಗೆ ಮದ್ಯದ ವ್ಯವಸ್ಥೆಗಳನ್ನು ನಿರ್ಬಂಧ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗುವುದಿಲ್ಲ. ಕೊಡಗಿನಲ್ಲಿ ಮದ್ಯ ಸೇವನೆ ಮಾಡುವುದು ಸಂಸ್ಕೃತಿಯ ಒಂದು ಭಾಗವಾಘಿದ್ದು, ಇದು ನಮ್ಮ ಸಂಸ್ಕೃತಿಯನ್ನು ಕಸಿದುಕೊಳ್ಳುವ ಕೆಲಸ ಆಗಿದೆ ಎಂದು ಕೊಡಗಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಲ್ಯಾಣ ಮಂಟಪ ಹಾಗೂ ಇತರೆ ಸ್ಥಳದಲ್ಲಿ ಮದುವೆ ನಡೆಯುವ ಸಂದರ್ಭದಲ್ಲಿ ಮದುವೆ ಹಾಲ್‍ಗಳು ಈಗಾಗಲೇ ಬುಕ್ ಆಗಿದೆ. ಕೊಡಗಿನ ಮದುವೆ ಸಮಾರಂಭಗಳಲ್ಲಿ ದೂರದ ಊರುಗಳಿಂದ ಬರುವ ಬಂಧು ಮಿತ್ರರು ಒಂದೆಡೆ ಸೇರಿ ಮಾತು ಕಥೆ ಹರಟೆ ಕೊಡವ ನೃತ್ಯಗಳನ್ನು ಮಾಡಿಕೊಂಡು ಸಂಭ್ರಮದಿಂದ ಇರುತ್ತವೆ. ಆದರೆ ಮದ್ಯವೇ ಇಲ್ಲ ಎಂದರೆ ದೂರದ ಊರಿನಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಗೆ ಮದುವೆಯಲ್ಲಿ ಅಷ್ಟು ಖುಷಿ ಇರುವುದಿಲ್ಲ. ಹೀಗಾಗಿ ಕೊಡಗು ಜಿಲ್ಲೆಗೆ ಚುನಾವಣಾ ಆಯೋಗದವರು ಹಾಗೂ ಅಬಕಾರಿ ಇಲಾಖೆಯವರು ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಬೇಕು. ಚುನಾವಣಾ ಆಯೋಗದವರು ಈ ಬಗ್ಗೆ ಚಿಂತನೆ ನಡೆಸಿ ಮದುವೆ ಸಮಾರಂಭಗಳಿಗೆ ಮದ್ಯ ಕೊಡಲು ಅವಕಾಶ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!