Monday, July 7, 2025
spot_imgspot_img
spot_imgspot_img

ಮದುವೆಯಾಗಿದ್ದರೂ ಫೇಸ್ ಬುಕ್ ನಲ್ಲಿ ಮತ್ತೊಂದು ಯುವತಿ ಜೊತೆ ಲವ್ವಿ ಡವ್ವಿ; ಯುವತಿ ರಂಪಾಟಕ್ಕೆ ನೊಂದು ಯುವಕ ಆತ್ಮಹತ್ಯೆ!

- Advertisement -
- Advertisement -

ಬೆಂಗಳೂರು: ಯುವಕನೋರ್ವ ಮದುವೆ ಆಗಿದ್ದರೂ ಬೇರೆ ಯುವತಿ ಜತೆ ಫೇಸ್​​ಬುಕ್​ ಪ್ರೀತಿಯಲ್ಲಿ ಬಿದ್ದಿದ್ದಾನೆ. ಮದುವೆಯಾಗಿರುವ ವಿಚಾರ ತಿಳಿದು ಯುವತಿ ರಂಪಾಟ ಮಾಡಿದ ಹಿನ್ನೆಲೆಯಲ್ಲಿ ನೊಂದು ಚೇತನ್ (27) ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಘಟನೆ ನಡೆದಿದೆ. 4 ವರ್ಷದ ಹಿಂದೆ ತುಮಕೂರಿನ ನವ್ಯಾ ಜತೆ ಚೇತನ್​ಗೆ ವಿವಾಹವಾಗಿತ್ತು. ನವ್ಯಾ, ಚೇತನ್ ದಂಪತಿಗೆ 3 ವರ್ಷದ ಹೆಣ್ಣುಮಗುವಿದೆ. 1 ವರ್ಷದ ಹಿಂದೆ ಕೌಟುಂಬಿಕ ಕಲಹದಿಂದ ಚೇತನ್ ಪತ್ನಿಯನ್ನು ತೊರೆದಿದ್ದ. ನಂತರ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್​ ಮೊರೆಹೋಗಿದ್ದ.

ಈ ನಡುವೆ ಫೇಸ್​​ಬುಕ್​​ನಲ್ಲಿ ಯುವತಿ ಜೊತೆಗೆ ಪ್ರೀತಿಗೆ ಬಿದ್ದಿದ್ದು, ಮದುವೆಯಾಗಿದ್ದ ವಿಚಾರ ತಿಳಿದು ಯುವತಿ ರಂಪಾಟ ನಡೆಸಿದ್ದಾಳೆ. ಇದರಿಂದ ನೊಂದು ಚೇತನ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Related news

error: Content is protected !!