Sunday, June 21, 2026
spot_imgspot_img
spot_imgspot_img

ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ; ಓರ್ವ ಮೃತ್ಯು..!

- Advertisement -
- Advertisement -

ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್​ ಭೀಕರ ಅಪಘಾತಕ್ಕೆ ಒಳಗಾಧ ಪರಿಣಾಮ ಅಪಘಾತದಲ್ಲಿ ಬಸ್ ಚಾಲಕ ಕಮ್ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ರಾಚಪ್ಪ (51) ಎಂದು ಗುರುತಿಸಲಾಗಿದೆ.

ನಸುಕಿನ ಜಾವ ಅಪಘಾತಕ್ಕೀಡಾದ ಸ್ಲೀಪರ್ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅನಾಹುತ ಸಂಭವಿಸಿದೆ. ಬಸ್ ಹುಬ್ಬಳ್ಳಿಯಿಂದ – ರಾಯಚೂರಿನತ್ತ ಬರ್ತಿತ್ತು. ಬಸ್ ನಲ್ಲಿ 9 ಪ್ರಯಾಣಿಕರ ಪೈಕಿ ಓರ್ವನಿಗೆ ಗಾಯವಾಗಿದೆ. ಅಪಘಾತವಾದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದ್ದು, ಬಸ್ಸಿನ ಮುಂಭಾಗ ಪುಡಿಪುಡಿಯಾಗಿದೆ. ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!