Wednesday, May 15, 2024
spot_imgspot_img
spot_imgspot_img

ಮದುವೆಯಾಗುವುದಾಗಿ ನಂಬಿಸಿ ನಟಿ ಮೇಲೆ ಅತ್ಯಾಚಾರ; ಸ್ಯಾಂಡಲ್ ವುಡ್ ನಿರ್ಮಾಪಕ ಅರೆಸ್ಟ್..!

- Advertisement -G L Acharya panikkar
- Advertisement -

ಬೆಂಗಳೂರು: ಮದುವೆ ಮಾಡಿಕೊಳ್ಳುವ ಭರವಸೆ ನೀಡಿ ಕನ್ನಡದ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ‘ವಿಷನ್​ 2023’ ಎಂಬ ಸಿನಿಮಾದ ಹೀರೋ ಕಮ್​ ನಿರ್ಮಾಪಕ ಆಗಿರುವ ಹರ್ಷವರ್ಧನ್​ ಟಿ.ಜಿ. ಅಲಿಯಾಸ್​ ವಿಜಯ ಭಾರ್ಗವ್​ ಎನ್ನಲಾಗಿದೆ.

ಸಿನಿಮಾಗಳಲ್ಲಿ ಸಹನಟಿಯಾಗಿ ಪಾತ್ರ ಮಾಡುತ್ತಿದ್ದ ಈ ಮಹಿಳೆಗೆ ಹರ್ಷವರ್ಧನ್​ ಪ್ರೀತಿ ಪ್ರೇಮದ ಬಲೆ ಬೀಸಿದ್ದರು. ‘ನೀನೇ ನನ್ನ ಹೆಂಡತಿ ಎಂದು ಹೇಳಿ ನಂಬಿಸಿದ್ದರು. ಕಳೆದ 2 ವರ್ಷಗಳಿಂದ ನನ್ನನ್ನು ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿ ಮೋಸ ಮಾಡಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ, ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದರು’ ಎಂದು ಮಹಿಳೆ ದೂರು ನೀಡಿದ್ದಾರೆ.

ಈ ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!