Wednesday, July 2, 2025
spot_imgspot_img
spot_imgspot_img

ಮದುವೆ, ಮತಾಂತರ ಆಗದಿದ್ದರೆ ಶ್ರದ್ಧಾ ಮಾದರಿ ಕೊಲೆ ಮಾಡುವುದಾಗಿ ಬೆದರಿಕೆ..!

- Advertisement -
- Advertisement -

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ಎಂಬಾಕೆಯ ಭೀಕರ ಹತ್ಯೆ ಪ್ರಕರಣ ಜನತೆಯನ್ನು ಭಯಭೀತರನ್ನಾಗಿಸಿದೆ. ಲವ್ ಜಿಹಾದ್‌ನ ಕರಾಳ ಮುಖಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದಾನೆ. ಹಿಂದೂ ಯುವಕನೊಂದು ಸಲುಗೆ ಬೆಳೆಸಿಕೊಂಡ ಮುಸ್ಲಿಂ ಯುವಕೋರ್ವ ಪ್ರಜ್ಞೆ ತಪ್ಪಿಸಿ ಅತ್ಯಾಚಾರಗೈದು ಆ ಬಳಿಕ ಅದರ ವಿಡಿಯೋ ತೋರಿಸಿ ಮದುವೆ ಹಾಗೂ ಮತಾಂತರ ಆಗು ಎಂದು ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಈ ಘಟನೆ ಉತ್ತರ ಪ್ರದೇಶದ ಮೀರತ್‌ ಎಂಬಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ಥೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್‍ ದಾಖಲಾಗಿದೆ.

ಹಿಂದೂ ಯುವಕನ ಹೆಸರು ಹೇಳಿಕೊಂಡು ಮೋಸಗೈದ ಕೀಚಕ..!
ಬ್ರಹ್ಮಪುರಿ ಪ್ರದೇಶದಲ್ಲಿರುವ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೋರ್ವ ಮೊಬೈಲ್‌ ಮೂಲಕ ಸಂಪರ್ಕಿಸಿ ತಾನೊಬ್ಬ ಹಿಂದೂ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಕಮಲ್ ಎಂದು ಪರಿಚಯ ಮಾಡಿಕೊಂಡಿದ್ದ ಭೂಪ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಭೇಟಿಯಾಗುವಂತೆ ಕರೆದು ತಂಪು ಪಾನಿಯದಲ್ಲಿ ಮತ್ತು ಬರುವ ಔಷಧಿ ನೀಡಿದ್ದಾನೆ. ಯುವತಿ ಪ್ರಜ್ಞೆ ತಪ್ಪಿದ ನಂತರ ಆಕೆಯ ಮೇಲೆ ಬಲಾತ್ಕಾರ ಮಾಡಿ ಆ ಘಟನೆಯನ್ನು ಚಿತ್ರೀಕರಿಸಿದ್ದಾನೆ.

ವೀಡಿಯೋ ಚಿತ್ರೀಕರಿಸಿ ಬೆದರಿಕೆ..!
ಬಲತ್ಕಾರದ ವೀಡಿಯೋ ಚಿತ್ರೀಕರಿಸಿ ನಂತರ ಯುವತಿಗೆ ತಾನು ಮುಸಲ್ಮಾನ ಎಂದು ಹೇಳಿ, ಮತಾಂತರಗೊಳ್ಳಲು ಮತ್ತು ವಿವಾಹ ಮಾಡಿಕೊಳ್ಳುಲು ಒತ್ತಾಯಿಸಿದ್ದಾನೆ. ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ..

ಶ್ರದ್ಧಾ ವಾಕರ್ ಮಾದರಿ ಕೊಲೆ ಮಾಡುತ್ತೇನೆ..!
ಒಂದು ವೇಳೆ ಮದುವೆ ಹಾಗೂ ಮತಾಂತರ ಆಗದಿದ್ದರೆ ಶ್ರದ್ಧ ವಾಕರ್ ಹಾಗೆ 35 ತುಂಡುಗಳಾಗಿ ಕತ್ತರಿಸುವೆ ಎಂದು ಬೆದರಿಕೆ ನೀಡಿದ್ದಾಗಿ ಸಂತ್ರಸ್ಥೆ ದೂರು ನೀಡಿದ್ದಾಳೆ. ಈ ಪ್ರಕರಣದಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ ನಂತರ ಕಮರ್‌ ವಿರುದ್ಧ ದೂರು ದಾಖಲಾಗಿದೆ.

- Advertisement -

Related news

error: Content is protected !!