Wednesday, July 2, 2025
spot_imgspot_img
spot_imgspot_img

ಮಧ್ಯರಾತ್ರಿ ಪ್ರೇಯಸಿಯ‌ ಭೇಟಿಗೆ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವಕ

- Advertisement -
- Advertisement -

ಬಿಹಾರ: ಯುವಕನೋರ್ವ ಮಧ್ಯರಾತ್ರಿ ಪ್ರೇಯಸಿಯ‌ ಮನೆಗೆ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ.

ಯುವಕ ಮಧ್ಯರಾತ್ರಿ ಪ್ರೇಯಸಿಯ‌ ಮನೆಗೆ ಹೋಗಿ ಆಕೆಯ ಜೊತೆ ಏಕಾಂತದಲ್ಲಿ ಮಾತನಾಡುತ್ತಿದ್ದ. ಈ ವೇಳೆ ಆಕೆಯ ಕುಟುಂಬಸ್ಥರಿಗೆ ಎಚ್ಚರವಾಗಿದೆ. ಆಗ ಗಾಬರಿಗೊಂಡ ಆತ ತಪ್ಪಿಸಿಕೊಳ್ಳಲು ಓಡಿದ್ದು, ತೆರೆದ ಬಾವಿಗೆ ಬಿದ್ದಿದ್ದಾನೆ.

ಬಳಿಕ ಯುವಕನ ಅಕ್ಕಪಕ್ಕದ ಮನೆಯವರು ಸಹ ಎಚ್ಚೆತ್ತಿದ್ದು ಬಾವಿಯ ಸುತ್ತಲೂ ಸೇರಿದ್ದಾರೆ. ಕಡೆಗೂ ಕಷ್ಟಪಟ್ಟು ಆತನನ್ನು ಮೇಲಕ್ಕೆ ಎತ್ತಲಾಗಿದೆ. ಇದರ ಮಧ್ಯೆ ಯುವತಿಯ ಕುಟುಂಬಸ್ಥರು ಪಂಚಾಯಿತಿಯವರಿಗೆ ದೂರು ನೀಡಿದ್ದು, ಆದರೆ ಪ್ರಕರಣ ಸುಖಾಂತ್ಯವಾಗಿದೆ.

ಕೊನೆಗೆ ಈ ಪ್ರೇಮ ವಿಚಾರವನ್ನು ಅರಿತ ಹಿರಿಯರೆಲ್ಲರೂ ಸೇರಿ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ಮಾಡಿಸಿಕೊಟ್ಟಿದ್ದಾರೆ.

- Advertisement -

Related news

error: Content is protected !!