Saturday, April 27, 2024
spot_imgspot_img
spot_imgspot_img

ಮಲ್ಪೆ: ಜೇನುಹುಳ ದಾಳಿಗೆ ಮಹಿಳೆ ಬಲಿ

- Advertisement -G L Acharya panikkar
- Advertisement -
vtv vitla

ಮಲ್ಪೆ: ಜೇನು ಹುಳ ಕಚ್ಚಿ 53 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣುವಿನಲ್ಲಿ ನಡೆದಿದೆ. ಸಂಪಾ (53) ಮೃತಪಟ್ಟವರು.

ಇವರು ಎಂದಿನಂತೆ ನಿನ್ನೆ ಬೆಳಿಗ್ಗೆ 10:00 ಗಂಟೆಗೆ ಕುದ್ರುವಿನಲ್ಲಿರುವ ತೋಟಕ್ಕೆ ಹಸುಗಳಿಗೆ ಹುಲ್ಲು ತರಲು ಹೋಗಿದ್ದರು. ಈ ವೇಳೆ ಹುಲ್ಲು ಕೊಯ್ಯುವಾಗ ಅವರಿಗೆ ಜೇನು ಹುಳ ಕಚ್ಚಿರುವುದಾಗಿ ಅವರು ಮನೆಗೆ ಬಂದು ತಿಳಿಸಿದ್ದರು. ಈ ವೇಳೆ ಮನೆಯವರು ಸಂಪಾರವರನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು.

ಮನೆಯಲ್ಲಿ ಇರುವಾಗ ತೀವ್ರ ಅಸ್ವಸ್ಥಗೊಂಡಿದ್ದ ಸಂಪಾ ಅವರನ್ನು ಚಿಕಿತ್ಸೆಗೆ ಉಡುಪಿಯ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಸಂಪಾ ರವರು ಚಿಕಿತ್ಸೆ ಫಲಕಾರಿ ಆಗಯಾಗದೇ ರಾತ್ರಿ 7:30 ಗಂಟೆ ಸಮಯಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಮೃತರ ಅಳಿಯ ಹರಿದಾಸ ಎಂಬವರು ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!