Sunday, May 5, 2024
spot_imgspot_img
spot_imgspot_img

ಮಲ್ಪೆ: ಬಂದರಿನಲ್ಲಿ ಮೀನು ಆಯುತಿದ್ದ ಅಪ್ರಾಪ್ತರ ರಕ್ಷಣೆ

- Advertisement -G L Acharya panikkar
- Advertisement -

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಆಯುತಿದ್ದ ಅಪ್ರಾಪ್ತರನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಉಡುಪಿ ಜಿಲ್ಲಾ ನಾಗರಿಕ ಸೇವಾ ಟ್ರಸ್ಟ್, ಹೊಸಬೆಳಕು ಸಂಸ್ಥೆ ಮಣಿಪಾಲ ಇವರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಮಲ್ಪೆ ಬಂದರಿನಲ್ಲಿ ನ. 03ರ ಬೆಳಗ್ಗಿನ ಜಾವ 4.30 ಗಂಟೆಗೆ ಇಲಾಖಾ ಅಧಿಕಾರಿಗಳು 16 ಅಪ್ರಾಪ್ತ ಮೀನು ಆಯುವ ಮಕ್ಕಳನ್ನು ಕಾರ್ಯಾಚರಣೆ‌ ನಡೆಸಿ ರಕ್ಷಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಉಡುಪಿ ಜಿಲ್ಲಾ ನಾಗರಿಕ ಸೇವಾ ಟ್ರಸ್ಟ್, ಹೊಸಬೆಳಕು ಸಂಸ್ಥೆ ಮಣಿಪಾಲ ಇವರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭ ಕೊಪ್ಪಳ ಮತ್ತು ದಾವಣಗೆರೆ ಮೂಲದ 11 ಬಾಲಕಿಯರು 5 ಬಾಲಕರು ಸೇರಿ 16 ಮೀನು ಆಯುವ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು ಇವರ ವಶಕ್ಕೆ ನೀಡಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೊ ಮತ್ತು ಸದಸ್ಯರು ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಿದ್ದಾರೆ .

- Advertisement -

Related news

error: Content is protected !!