Friday, April 26, 2024
spot_imgspot_img
spot_imgspot_img

ಮಲ್ಪೆ ಬೀಚ್ ನಲ್ಲಿ ಅಲೆಯ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ

- Advertisement -G L Acharya panikkar
- Advertisement -

ಉಡುಪಿ: ಈಜುವ ವೇಳೆ ಮಲ್ಪೆ ಬೀಚ್​ನಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬಿಜಾಪುರ ಮೂಲದ ಮೋಬಿನ್, ಸೋಫಿಯಾ, ಅಹ್ಮದ್ ಮತ್ತು ಮೊಹಮ್ಮದ್ ಎಂಬುವರನ್ನು ರಕ್ಷಿಸಲಾಗಿದೆ. ಬಿಜಾಪುರ ಮೂಲದವರಾದ ಇವರು ಮಲ್ಪೆ ಬೀಚ್​​ಗೆ ಪ್ರವಾಸಕ್ಕೆಂದು ಬಂದಿದ್ದು, ಈ ವೇಳೆ ಕಡಲಿಗೆ ಇಳಿಯದಂತೆ ಇಲ್ಲಿನ ಪ್ರವಾಸಿಗರಿಗೆ ಎಚ್ಚರಿಕೆಯನ್ನೂ ನೀಡಿದರೂ ಈಜಲು ತೆರಳಿದ ವೇಳೆ ಸಮುದ್ರದ ಅಲೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಈ ವೇಳೆ ನಾಲ್ವರನ್ನು ಜೀವ ರಕ್ಷಕ ದಳದ ಭರತ್​, ಮಧು, ರವಿ ಹಾಗೂ ವಿನೋದ್​​ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ.

vtv vitla
- Advertisement -

Related news

error: Content is protected !!