Saturday, May 18, 2024
spot_imgspot_img
spot_imgspot_img

ಮಳೆಗಾಲದಲ್ಲಿ ಈ ಆಹಾರ ಸೇವಿಸುವುದರಿಂದ ಮೊಡವೆಗಳಾಗುತ್ತವೆ ನೆನಪಿರಲಿ

- Advertisement -G L Acharya panikkar
- Advertisement -

ಮಳೆಗಾಲದಲ್ಲಿ ಬಹುತೇಕರಿಗೆ ಬೆಚ್ಚಗೆ ಹೊದ್ದು ಮಲಗುವುದು ಇಷ್ಟವಾದರೆ ಇನ್ನೂ ಕೆಲವರಿಗೆ ಬಿಸಿ ಬಿಸಿ ಚಹಾ, ಅಥವಾ ಕಾಫಿ ಜೊತೆ ಪಕೋಡಾ, ಎಣ್ಣೆಯಲ್ಲಿ ಖರೀದ ತಿನಿಸುಗಳನ್ನು ಸೇವಿಸುವುದು ಇಷ್ಟ. ಆದರೆ ಮಳೆಗಾಗಲದಲ್ಲಿ ನಾವು ನಮಗರಿವಿಲ್ಲದೆ ಮಾಡುವ ಕೆಲಸ ಅಥವಾ ಸೇವಿಸುವ ಆಹಾರಗಳು ನಮ್ಮ ದೇಹದ ಮೇಲೆ ಪ್ರತಿಕ್ರಿಯಿಸುತ್ತದೆ. ತ್ವಚೆಯ ಮೇಲೆಯೂ ಪ್ರಭಾವ ಬೀರುತ್ತದೆ.

ಅದು ನಿಮ್ಮ ತ್ವಚೆಯ ಮೇಲೆ ಮೊಡವೆಗಳನ್ನು ಉಂಟುಮಾಡಬಹುದು. ಈ ಸಮಸ್ಯೆಗಳಿಂದ ಪಾರಾಗಬೇಕಾದರೆ ಮಾನ್ಸೂನ್‌ನಲ್ಲಿ ಕೆಲವು ಆಹಾರಗಳನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ.

​ಹೆಚ್ಚು ಹಾಲು ಕುಡಿಯಬೇಡಿ

ಹಾಲು ಕುಡಿಯುವುದು ಒಳ್ಳೆಯದು, ಆದರೆ ಅದನ್ನು ಹೆಚ್ಚು ಸೇವಿಸುವುದರಿಂದ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ, ಶೀತದಿಂದಾಗಿ ಜೀರ್ಣಕ್ರಿಯೆಯು ನಿಧಾನವಾಗಿರುತ್ತದೆ. ಹಾರ್ಮೋನುಗಳು ಚರ್ಮದ ಮೇಲೆ ಬಹಳ ಬೇಗನೆ ಪರಿಣಾಮ ಬೀರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮುಖದ ಮೇಲೆ ಮೊಡವೆಗಳು ಬಹಳ ಬೇಗನೆ ಕಾಣಿಸಿಕೊಳ್ಳುತ್ತವೆ.

​ಪಾಲಕ್‌ ಸೊಪ್ಪು

ಪಾಲಕ್ ಕಬ್ಬಿಣದಂಶದಿಂದ ಸಮೃದ್ಧವಾದ ಸೊಪ್ಪಾಗಿದೆ. ಇದು ಕಣ್ಣಿಗೆ ಒಳ್ಳೆಯದು ಜೊತೆಗೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಆದರೆ, ಮಳೆಗಾಲದಲ್ಲಿ ಇದನ್ನು ಅತಿಯಾಗಿ ತಿನ್ನುವುದರಿಂದ ಮೊಡವೆ ಸಮಸ್ಯೆ ಉಂಟಾಗುತ್ತದೆ. ಇದರಲ್ಲಿರುವ ಅಯೋಡಿನ್ ಪ್ರಮಾಣವೇ ಇದಕ್ಕೆ ಕಾರಣ. ಈ ತರಕಾರಿ ನಿಮ್ಮ ನೆಚ್ಚಿನದಾಗಿದ್ದರೆ, ಅದನ್ನು ಮಳೆಗಾಲದಲ್ಲಿ ಸೇವಿಸುವುದನ್ನು ಕಡಿಮೆ ಉತ್ತಮ.

​ಮಾವಿನ ಹಣ್ಣು ಹೆಚ್ಚು ಸೇವಿಸದಿರಿ

ಮಳೆಗಾಲದಲ್ಲಿ ಸಿಕ್ಕಾಪಟ್ಟೆ ಮಾವಿನಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಡಿಮೆ ಬೆಲೆಗೂ ಸಿಗುತ್ತದೆ. ಹಾಗಂತ ಮಿತಿಮೀರಿ ಮಾವಿನಹಣ್ಣನ್ನು ಸೇವಿಸದಿರಿ. ಇದು ಮೊಡವೆಗಳಿಗೆ ಕಾರಣವಾಗಬಹುದು.

vtv vitla

​ಕೇಕ್, ಚಾಕೋಲೇಟ್‌ ಸೇವನೆ ಕಡಿಮೆ ಮಾಡಿ

ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರಗಳು ಮೊಡವೆಗಳನ್ನು ಉಂಟುಮಾಡಬಹುದು. ಇದು ಚರ್ಮದ ಉರಿಯೂತವನ್ನು ಉಂಟುಮಾಡುತ್ತದೆ. ಇದು ಚರ್ಮದ ದದ್ದುಗಳಿಗೆ ಕಾರಣವಾಗಬಹುದು.

ಹೆಚ್ಚಿನ ಗ್ಲೈಸೆಮಿಕ್ ಆಹಾರಗಳಲ್ಲಿ ಕೇಕ್, ಚಾಕೊಲೇಟ್, ಸಿಹಿ ಪಾನೀಯಗಳು, ಐಸ್ ಕ್ರೀಮ್, ತಂಪು ಪಾನೀಯಗಳು, ಬಿಳಿ ಬ್ರೆಡ್, ಆಲೂಗಡ್ಡೆ, ಬಿಳಿ ಅಕ್ಕಿ, ಇತ್ಯಾದಿ ಸೇರಿವೆ. ಹಾಗಾಗಿ ಮಳೆಗಾಲದಲ್ಲಿ ಈ ಆಹಾರಗಳನ್ನು ಕಡಿಮೆ ಸೇವಿಸಿ.

ಕರಿದ ಆಹಾರದಿಂದ ದೂರವಿರಿ

ಮಳೆಗಾಲದಲ್ಲಿ ಚಹಾ ಜೊತೆಗೆ ಪಕೋಡ, ಬಜ್ಜಿಯನ್ನು ತಿನ್ನಲು ಖುಷಿಯಾಗುತ್ತದೆ. ಅತಿಯಾಗಿ ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದರಿಂದ ಮೊಡವೆಗಳನ್ನು ಉಂಟುಮಾಡುತ್ತದೆ. ಇದು ಚರ್ಮವನ್ನು ಹಾನಿಗೊಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಾನ್ಸೂನ್‌ನಲ್ಲಿ ಕರಿದ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಉತ್ತಮ. ಜಂಕ್‌ ಫುಡ್‌ನ್ನು ಹೆಚ್ಚಾಗಿ ಸೇವಿಸದಿರುವುದು ಒಳ್ಳೆಯದು.

​ಮಳೆಗಾಲದಲ್ಲಿ ಮೊಡವೆಗಳ ನಿವಾರಣೆ ಹೇಗೆ?

  • ಇಡೀ ಧಾನ್ಯಗಳು, ಸಲಾಡ್, ಮೊಸರು ನಿಮ್ಮ ಆಹಾರದಲ್ಲಿ ಸೇರಿಸಿ. ಇವುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು.
  • ಸಾಕಷ್ಟು ನೀರು ಕುಡಿಯಿರಿ. ಮಳೆಗಾಲದಲ್ಲಿ ಅಷ್ಟಾಗಿ ಬಾಯಾರಿಕೆ ಆಗದಿದ್ದರೂ ಆಗಾಗ ನೀರನ್ನು ಕುಡಿಯಿರಿ. ದೇಹವನ್ನು ಹೈಡ್ರೀಕರಿಸಿ.
  • ಅರಿಶಿನವು ಉರಿಯೂತ ನಿವಾರಕ ಮತ್ತು ಮೊಡವೆ ವಿರೋಧಿ ಗುಣವನ್ನು ಹೊಂದಿದೆ.
  • ಮೊಡವೆ ಮತ್ತು ಪಿಗ್ಮೆಂಟೇಶನ್ ತಡೆಯಲು ಅರಿಶಿನವನ್ನು ಹಾಲಿನೊಂದಿಗೆ ಸೇವಿಸಬಹುದು ಅಥವಾ ಫೇಸ್ ಪ್ಯಾಕ್‌ನಲ್ಲಿ ಬಳಸಬಹುದು.
  • ಕುಂಬಳ ಕಾಯಿ, ಸೋರೆಕಾಯಿ, ಹಾಗಲಕಾಯಿಯನ್ನು ಹೆಚ್ಚಾಗಿ ಸೇವಿಸಬೇಕು.
- Advertisement -

Related news

error: Content is protected !!