Thursday, December 5, 2024
spot_imgspot_img
spot_imgspot_img

ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

- Advertisement -
- Advertisement -

ಬೇವಿನ ಮರ ನಿಸರ್ಗದತ್ತವಾಗಿ ನಮಗೆ ಸಿಕ್ಕಿರುವ ಒಂದು ವರದಾನ ಎಂದು ಹೇಳಬಹುದು. ಹಿಂದಿನ ಕಾಲದಿಂದಲೂ ಸಹ ಆಯುರ್ವೇದದ ಹಲವಾರು ಪ್ರಕಾರಗಳಲ್ಲಿ ಬಹಳಷ್ಟು ವಿಚಿತ್ರ ಕಾಯಿಲೆಗಳಿಗೆ ಔಷಧಿ ಕೊಟ್ಟು ವಾಸಿ ಮಾಡುವ ಅದ್ಭುತ ಗುಣ ಲಕ್ಷಣ ಬೇವಿನ ಪ್ರತಿಯೊಂದು ಭಾಗಕ್ಕೂ ಇದೆ ಎಂದರೆ ನಂಬಲೇಬೇಕು.

ನಮ್ಮ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ನಮ್ಮ ಹಲವಾರು ಸಮಸ್ಯೆಗಳಿಗೆ ಪ್ರಕೃತಿಯಿಂದಲೇ ನಿಸರ್ಗದತ್ತವಾಗಿ ಸಾಕಷ್ಟು ಪರಿಹಾರಗಳು ಸಿಗುತ್ತವೆ. ಕೆಲವೊಮ್ಮೆ ನಮ್ಮ ಕಣ್ಣಿಗೆ ಕಂಡರೂ ಸಹ ನಾವು ಅವುಗಳನ್ನು ನಿರ್ಲಕ್ಷ ಮಾಡಿ ಮುಂದೆ ಸಾಗುತ್ತೇವೆ. ಅದರಲ್ಲಿ ಬೇವಿನ ಮರ ಸಹ ಒಂದು. ಬೇವಿನ ಮರ ನಿಸರ್ಗದತ್ತವಾಗಿ ನಮಗೆ ಸಿಕ್ಕಿರುವ ಒಂದು ವರದಾನ ಎಂದು ಹೇಳಬಹುದು.

ಬೇವಿನ ಹೂವು, ಬೇವಿನ ಎಲೆ, ಬೇವಿನ ಚಕ್ಕೆ ಮತ್ತು ಬೇವಿನ ಬೇರು ತಮ್ಮದೇ ಆದ ಒಂದೊಂದು ಪ್ರಕಾರಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಉಪಯೋಗಕ್ಕೆ ಬರುತ್ತವೆ. ಚರ್ಮದ ಹಲವಾರು ಸಮಸ್ಯೆಗಳು ಮತ್ತು ದೇಹದ ಹಲವಾರು ವಿಷಕಾರಿ ಅಂಶಗಳು ನಿತ್ಯ ನಿಯಮಿತ ಬೇವಿನ ನೀರಿನ ಸ್ನಾನದಿಂದ ದೂರವಾಗುತ್ತವೆ ಎಂದು ಹೇಳುತ್ತಾರೆ.

ನಮ್ಮ ಮುಖದ ಮೇಲೆ ಉಂಟಾಗುವ ಮೊಡವೆಗಳು, ಗುಳ್ಳೆಗಳು ಸಣ್ಣ ಪುಟ್ಟ ಗಾಯಗಳ ಕಲೆಗಳು ಮತ್ತು ಬ್ಲಾಕ್ಹೆಡ್ ಗಳ ನಿವಾರಣೆ ಬೇವಿನಿಂದ ಆಗುತ್ತದೆ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಕಂಡು ಬರುವ ಚರ್ಮದ ಇಂತಹ ಸಮಸ್ಯೆಗಳು ಮತ್ತು ಚರ್ಮದ ಅಲರ್ಜಿ ಪರಿಹಾರಕ್ಕೆ ಬೇವಿನ ನೀರಿನ ಸ್ನಾನ ಸಹಾಯ ಮಾಡುತ್ತದೆ.

ಬೇವಿನಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು, ಆಂಟಿ – ಮೈಕ್ರೋಬಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳು ಹೆಚ್ಚಾಗಿರುವುದರಿಂದ ಚರ್ಮದ ಸಮಸ್ಯೆಗಳಾದ ಸೋರಿಯಾಸಿಸ್, ಸಿಡುಬು ಮತ್ತು ಇಸುಬು ರೀತಿಯ ಸಮಸ್ಯೆಗಳು ಕ್ರಮೇಣವಾಗಿ ಇಲ್ಲವಾಗುತ್ತವೆ.

ಬಹಳ ಜನರಿಗೆ ದೇಹದಲ್ಲಿ ಬೆವರಿನಿಂದ ದುರ್ವಾಸನೆ ಹೆಚ್ಚಾಗಿರುತ್ತದೆ. ಅಂತಹವರು ಬೇವಿನ ನೀರಿನ ಸ್ನಾನ ಮಾಡುವ ಅಭ್ಯಾಸ ಮಾಡಿ ಕೊಳ್ಳಬಹುದು. ಕೇವಲ ಬೆವರಿನ ದುರ್ವಾಸನೆ ದೂರವಾಗುವುದು ಮಾತ್ರವಲ್ಲದೆ ಎಣ್ಣೆಯ ಚರ್ಮ ಹೊಂದಿದ ಹಲವರಿಗೆ ಇದರಿಂದ ಪ್ರಯೋಜನಗಳು ಉಂಟಾಗುತ್ತದೆ.

- Advertisement -

Related news

error: Content is protected !!