Sunday, June 7, 2026
spot_imgspot_img
spot_imgspot_img

ಮಸೀದಿ ಧ್ವಂಸಗೊಳಿಸಿ ಕೇಸರಿ ಬಣ್ಣ ಬಳಿದ ದುಷ್ಕರ್ಮಿಗಳು; ಸ್ಥಳದಲ್ಲಿ ಬಿಗುವಿನ ವಾತಾವರಣ

- Advertisement -
- Advertisement -

ಭೋಪಾಲ್: ಇತಿಹಾಸ ಪ್ರಸಿದ್ಧ ಮಸೀದಿಯನ್ನು ಧ್ವಂಸಗೊಳಿಸಿ ದುಷ್ಕರ್ಮಿಗಳು ಕೇಸರಿ ಬಣ್ಣ ಬಳಿದ ಘಟನೆ ನಡೆದಿದೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನ ನರ್ಮದಾಪುರಂ ನಲ್ಲಿ ನಡೆದಿದೆ‌.

ದರ್ಗಾದ ಮರದ ಬಾಗಿಲನ್ನು ಮುರಿದು ಪ್ರವೇಶಿಸಿದ ದುಷ್ಕರ್ಮಿಗಳು, ದರ್ಗಾದ ಮಿನಾರ, ಸಮಾಧಿ ಮತ್ತು ಪ್ರವೇಶದ್ವಾರಕ್ಕೂ ಕೇಸರಿ ಬಣ್ಣ ಬಳಿದಿದ್ದಾರೆ. ನೀರಿನ‌ ಪಂಪನ್ನೂ ಕಿತ್ತು ಹಾಕಿ ವಿಕೃತಿ ಮೆರೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಪಿಗಳ‌ ವಿರುದ್ಧ ಈಗಾಗಲೇ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!