- Advertisement -
- Advertisement -


ಮಧ್ಯಪ್ರದೇಶ: ರಾಮಯಣ ಬರೆದ ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್‌ಗಳಿಗೆ ಹೋಲಿಸಿದ ಉರ್ದು ಕವಿ ಮುನ್ನಾವರ್ ರಾನಾ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬಿಜೆಪಿ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ಸುನೀಲ್ ಮಾಳವಿಯಾ ಹಾಗೂ ವಾಲ್ಮೀಕಿ ಜನಾಂಗದ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ ಗುನಾ ಪೊಲೀಸರು ಕವಿ ಮುನ್ನಾವರ್ ರಾನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕವಿ ಮುನ್ನಾವರ್ ರಾನಾ ಅವರು ರಾಮಯಣ ಬರೆಯುವ ಮೊದಲು ವಾಲ್ಮಿಕಿ ಡಕಾಯಿತನಾಗಿದ್ದ ನಂತರ ಆತ ತಾಲಿಬಾನಿಗಳಂತೆ ಬದಲಾಗಿದ್ದ ಎಂದು ಹೇಳಿಕೆ ನೀಡಿದ್ದರು. ರಾನಾ ಅವರ ಈ ಹೇಳಿಕೆ ವಾಲ್ಮೀಕಿ ಜನಾಂಗದವರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಮಾಳವಿಯಾ ಅವರು ದೂರು ದಾಖಲಿಸಿದ್ದಾರೆ.




- Advertisement -