Tuesday, June 23, 2026
spot_imgspot_img
spot_imgspot_img

ಐಪಿಎಲ್ 2021: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಗೆ 10 ರನ್ ಗಳ ಜಯ

- Advertisement -
- Advertisement -

ಚೆನ್ನೈ: 14 ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 10 ರನ್ ಗಳಿಂದ ಜಯಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ನಿತೀಶ್ ರಾಣಾ (80) ಹಾಗೂ ರಾಹುಲ್ ತ್ರಿಪಾಠಿ (53) ಬಿರುಸಿನ ಅರ್ಧಶತಕಗಳ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಮನೀಶ್ ಪಾಂಡೆ (61) ಹಾಗೂ ಜಾನಿ ಬೆಸ್ಟೊ (55) ಅರ್ಧಶತಕಗಳ ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಮನೀಷ್ ಪಾಂಡೇ ಹೋರಾಟ ವ್ಯರ್ಥಗೊಂಡಿದೆ.

- Advertisement -

Related news

error: Content is protected !!