Sunday, May 5, 2024
spot_imgspot_img
spot_imgspot_img

ಮಹಿಳೆಗೆ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದ ರಿಯಾಜ್.!

- Advertisement -G L Acharya panikkar
- Advertisement -

ತ್ರಿಶೂರ್: ಕೊಡಂಗಲ್ಲೂರಿನಲ್ಲಿ ಬಟ್ಟೆ ಅಂಗಡಿಯೊoದರ ಮಾಲಕಿಯನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ವಿಲಂಗರಪರoಬಿಲ್ ನಾಸರ್ ಅವರ ಪತ್ನಿ ರಿನ್ಸಿ ಎನ್ನಲಾಗಿದೆ. ಮಹಿಳೆಯ ಮೃತದೇಹದ ಮೇಲೆ ಮೂವತ್ತಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿದ್ದು, ಕೃತ್ಯದ ಬಳಿಕ ಆರೋಪಿ ರಿಯಾಜ್ ತಲೆಮರೆಸಿಕೊಂಡಿದ್ದಾನೆ.

ತನ್ನ ಮಕ್ಕಳನ್ನು ಕರೆದುಕೊಂಡು ರಿನ್ಸಿ ಸ್ಕೂಟರ್ ನಲ್ಲಿ ಮನೆಗೆ ಹೊರಟಿದ್ದ ವೇಳೆ ರಸ್ತೆ ಮಧ್ಯೆ ರಿಯಾಜ್ ಅಡ್ಡಗಟ್ಟಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ರಿನ್ಸಿಯ ಮೇಲೆ 30ಕ್ಕೂ ಹೆಚ್ಚು ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ರಿನ್ಸಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಆರೋಪಿ ರಿಯಾಜ್ ಮೊದಲೇ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಕಾರಣದಿಂದಾಗಿ ರಿಯಾಜ್ ನ್ನು ಕೆಲಸದಿಂದ ತೆಗೆದುಹಾಕಿದ್ದರು. ಆದರೆ ಇದಾದ ಬಳಿಕವೂ ಹಲವು ಬಾರಿ ರಿನ್ಸಿಯ ಮನೆಗೆ ಮತ್ತು ಅಂಗಡಿಗೆ ಹೋಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಕೊಡುಂಗಲ್ಲೂರು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!