Wednesday, July 2, 2025
spot_imgspot_img
spot_imgspot_img

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ರೀತಿಯ ಹೇಳಿಕೆ; ಬಾಬಾ ರಾಮ್‌ ದೇವ್ ಕ್ಷಮೆ ಯಾಚನೆ

- Advertisement -
- Advertisement -

ಮುಂಬೈ: ಮಹಿಳೆಯರ ಉಡುಪಿನ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರು ಇದೀಗ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್, ಮಹಿಳೆಯರ ಬಗ್ಗೆ ಬಾಬಾ ರಾಮ್‌ದೇವ್ ವಿವಾದಾತ್ಮಕವಾಗಿ ಮಾತನಾಡಿದ್ದನ್ನು ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿ ಅವರಿಗೆ ನೋಟಿಸ್ ನೀಡಿತ್ತು. ಇದೀಗ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಆವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕಳೆದ ವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಮ್‌ದೇವ್, ಮಹಿಳೆಯರು ಸೀರೆ, ಸಲ್ವಾರ್‍ ಕಮೀಜ್ ಸೇರಿದಂತೆ ಯಾವ ಉಡುಪು ಧರಿಸಿದರೂ ಸೌಂದರ್ಯವಂತರಾಗಿ ಕಾಣುತ್ತಾರೆ. ಅವರು ಏನನ್ನೂ ಧರಿಸದೇ ಇದ್ದರೆ ಇನ್ನಷ್ಟು ಲಕ್ಷಣವಾಗಿ ಕಾಣುತ್ತಾರೆ ಎಂದಿದ್ದರು. ಅವರ ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

- Advertisement -

Related news

error: Content is protected !!