Monday, May 20, 2024
spot_imgspot_img
spot_imgspot_img

ಮಹಿಳೆಯರ ಸುರಕ್ಷತೆಗಾಗಿ ಹೊಸ ಫೀಚರ್​ ಅಳವಡಿಕೆಗೆ ಮುಂದಾದ ಫೇಸ್​ಬುಕ್​

- Advertisement -G L Acharya panikkar
- Advertisement -
vtv vitla
vtv vitla

ಮೆಟಾ ಒಡೆತನ ಹೊಂದಿರುವ ಸಾಮಾಜಿಕ ಜಾಲತಣಗಳಲ್ಲಿ ಇನ್ಮುಂದೆ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಹೊಸದೊಂದು ಫೀಚರ್​ನ್ನು ಅಳವಡಿಸೋದಾಗಿ ಹೇಳಿದೆ.

ಮಹಿಳೆಯರ ಸುರಕ್ಷತೆಗಾಗಿ Stop NCII.Org ಪ್ಲಾಟ್​ಫಾರ್ಮ್​ಅನ್ನು ಲಾಂಚ್ ಮಾಡಲಿದೆ. ಈ ಮೂಲಕ ಸಾಮಾಜಿಕ ಜಾಲತಾಣಘಳಾದ ಫೇಸ್​ಬುಕ್​, ಇನ್ಸ್​ಟಾಗ್ರಾಂನಲ್ಲಿ ಮಹಿಳೆಯರ ಅಶ್ಲೀಲ ಚಿತ್ರ, ಖಾಸಗಿ ವಿಡಿಯೋಗಳನ್ನ ಹಂಚಿಕೊಳ್ಳುವ ಅಥವಾ ಪೋಸ್ಟ್​ ಮಾಡುವುದಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಹಿಂದಿಯಲ್ಲದೇ, ಭಾರತದ 11 ಪ್ರಾದೇಶಿಕ ಭಾಷೆಗಳಲ್ಲೂ ಈ ಫೀಚರ್​ ಲಭ್ಯವಿರಲಿದ್ದು ಸೋಷಿಯಲ್​ ಮೀಡಿಯಾ ಬಳಸುವ ಭಾರತದ ಮಹಿಳೆಯರಿಗೆ ಅನುಕೂಲದ ಜೊತೆ ಸುರಕ್ಷತೆಯೂ ಇರಲಿದೆ ಅಂತ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಕುರಿತು ಮಾಹಿತಿ ನೀಡಿದ ಮೆಟಾ ಸಂಸ್ಥೆಯ ಜಾಗತಿಕ ಸುರಕ್ಷತಾ ವಿಭಾಗದ ನಿರ್ದೇಶಕಿ ಕರುಣಾ ‘ಈ ಹೊಸ ಫೀಚರ್​ಗಳಿಂದ ಮಹಿಳೆಯರಿಗೆ ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಳವಡಿಸಲಾಗುವುದು. ಜೊತೆಗೆ ಸಂಸ್ಥೆಯು ಮುಂದಿನ ದಿನಗಳಲ್ಲಿ ಕೂಡ ಸುರಕ್ಷತಾ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದೇವೆ’ ಎಂದಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!