Monday, May 6, 2024
spot_imgspot_img
spot_imgspot_img

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

- Advertisement -G L Acharya panikkar
- Advertisement -

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಹೃದ್ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ಸಿಂಗ್ ಅವರು ಎರಡು ವಾರಗಳ ಹಿಂದೆ ಅಂದರೆ ಸೆಪ್ಟೆಂಬರ್ 26 ರಂದು 89 ನೇ ವರ್ಷಕ್ಕೆ ಕಾಲಿಟ್ಟಿದ್ದರು. ಏಪ್ರಿಲ್‌ನಲ್ಲಿ ಮಾಜಿ ಪ್ರಧಾನಿಗೆ ಕೊವಿಡ್ -19 ತಗುಲಿ ಏಮ್ಸ್ ಗೆ ದಾಖಲಾಗಿದ್ದರು.

ಬುಧುವಾರ ಸಂಜೆ ಸಿಂಗ್ ಅವರಿಗೆ ಜ್ವರ ಮತ್ತು ಸುಸ್ತು ಕಂಡು ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ನಿನ್ನೆಯಿಂದಲೇ ಜ್ವರ ಇತ್ತು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮಾಜಿ ಪ್ರಧಾನಿ 2009 ರಲ್ಲಿ ಏಮ್ಸ್ ನಲ್ಲಿ ಕೊರೊನರಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರಿಗೆ ಮುಂಬೈ ಮೂಲದ ಪ್ರಸಿದ್ಧ ಕಾರ್ಡಿಯೊವ್ಯಾಸ್ಕುಲಾರ್ ಥೊರಾಸಿಕ್ ಸರ್ಜನ್ ಮತ್ತು ಏಷ್ಯನ್ ಹಾರ್ಟ್ ಇನ್ಸಿಟ್ಯೂಟ್ (AHI) ಉಪಾಧ್ಯಕ್ಷ ರಮಾಕಾಂತ ಪಾಂಡ ನೇತೃತ್ವದ ವೈದ್ಯರ ತಂಡದಿಂದ ರೆಡೋ ಕಾರ್ಡಿಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿತ್ತು. ವರದಿಗಳ ಪ್ರಕಾರ 1990 ರಲ್ಲಿ ಬೈಪಾಸ್ ಆಪರೇಷನ್ ಮತ್ತು 2004 ರಲ್ಲಿ ಸ್ಟೆಂಟಿಂಗ್ ಚಿಕಿತ್ಸೆಗೆ ಒಳಗಾದ ನಂತರ ಸಿಂಗ್ ಅವರಿಗೆ ಐದು ಬೈಪಾಸ್ ಮಾಡಲಾಗಿದೆ.

ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಪ್ರಣವ್ ಝಾ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಜಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಆಧಾರರಹಿತ ವದಂತಿ ಹರಿದಾಡುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ. ಅವರು ರೊಟೀನ್ ಚೆಕಪ್​​ಗೆ ಒಳಗಾಗುತ್ತಿದ್ದಾರೆ. ಅಗತ್ಯ ಬಂದರೆ ಹೆಚ್ಚಿನ ಮಾಹಿತಿಗಳನ್ನು ನಾವು ಶೇರ್ ಮಾಡುತ್ತೇವೆ. ಮಾಧ್ಯಮದಲ್ಲಿರುವ ನಮ್ಮ ಸ್ನೇಹಿತರ ಕಾಳಜಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ.

driving
- Advertisement -

Related news

error: Content is protected !!