Monday, June 15, 2026
spot_imgspot_img
spot_imgspot_img

ಮಾಜಿ ಪ್ರಿಯತಮೆ ಜೊತೆ ಮಾತನಾಡಿದ ಕಾರಣಕ್ಕೆ ವ್ಯಕ್ತಿಯ ಕೊಲೆ; ಆರೋಪಿಗಳು ಅರೆಸ್ಟ್!

- Advertisement -
- Advertisement -

ದೆಹಲಿ: ತನ್ನ ಮಾಜಿ ಗರ್ಲ್‌ಫ್ರೆಂಡ್ ಜೊತೆಗೆ ವ್ಯಕ್ತಿಯೊಬ್ಬ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನು ಚಾಕುವಿನಿಂದ ಇರಿದ ಘಟನೆ ದೆಹಲಿಯ ಮಂಗೊಲ್ಪುರಿ ಪ್ರದೇಶದಲ್ಲಿ ನಡೆದಿದೆ.

ಅಶದ್ ಅಲಿಯಾಸ್ ಬಿಲ್ಲಾ (20 ) ಹಾಗೂ ಆತನ ಅಪ್ರಾಪ್ತ ವಯಸ್ಸಿನ ಸ್ನೇಹಿತ ಬಂಧಿತ ಆರೋಪಿಗಳಾಗಿದ್ದಾರೆ.

ದೆಹಲಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಶದ್ ಲಾಕ್‌ಡೌನ್ ವೇಳೆ ತನ್ನ ಊರು ಕಾನ್ಪುರಕ್ಕೆ ಮರಳಿದ್ದಾನೆ. ಆ ವೇಳೆ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಬ್ರೇಕಪ್ ಆಗಿದೆ.

ತನ್ನ ಮಾಜಿ ಪ್ರೇಯಸಿಯೊಂದಿಗೆ ಸೈಫ್ ಎಂಬಾತ ಸಂಪರ್ಕದಲ್ಲಿದ್ದಾನೆ ಎಂದು ಅರಿತ ಅಶದ್ ಆತನಿಗೆ ವಾರ್ನಿಂಗ್ ಮಾಡಿ ಹೋಗಿದ್ದ ಆದರೂ ಸಹ ತನ್ನ ಗರ್ಲ್‌ಫ್ರೆಂಡ್‌ ಜೊತೆಗೆ ಸಂಪರ್ಕದಲ್ಲಿರುವುದನ್ನು ಬಿಡದ ಸೈಫ್ ಮೇಲೆ ಬುಧವಾರ ಚಾಕುವಿನಿಂದ ಇರಿದಿದ್ದಾನೆ.

- Advertisement -

Related news

error: Content is protected !!