Sunday, June 28, 2026
spot_imgspot_img
spot_imgspot_img

ಮಾಟ ಮಂತ್ರಕ್ಕೆ ಬಲಿಯಾದ ಮೂರು ವರ್ಷದ ಬಾಲಕ!

- Advertisement -
- Advertisement -

ಉತ್ತರಪ್ರದೇಶ: ಮಾಟ ಮಂತ್ರ ಮಾಡಲು ಮೂರು ವರ್ಷದ ಬಾಲಕನೊಬ್ಬನನ್ನು ಹತ್ಯೆಗೈದಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ಗುರು ಪೂರ್ಣಿಮೆಯ ರಾತ್ರಿಯಂದು ನಾಲ್ವರು ಪುರುಷರು ಹಾಗೂ ಮಹಿಳೆಯರು ಸೇರಿ ಬಾಲಕನನ್ನು ಕೊಂದು ಹೂತು ಹಾಕಿ, ಮಾಟ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಾಲಕನ ದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕನ ಗುರುತು ಪತ್ತೆ ಮಾಡಲು ಪ್ರಯತ್ನಗಳು ಸಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!