Friday, April 19, 2024
spot_imgspot_img
spot_imgspot_img

ಮಾರ್ಚ್ 12ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ; ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

- Advertisement -G L Acharya panikkar
- Advertisement -

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್ 12ರಂದು ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಅಂದು ವಿವಾಹವಾಗಲು ಬಯಸುವವರು ದೇವಳದ ಕಚೇರಿಯಿಂದ ಅರ್ಜಿ ಪ್ರತಿ ಪಡೆದು, ಫೆ.15ರೊಳಗೆ ಭರ್ತಿ ಮಾಡಿ ಸಲ್ಲಿಸುವಂತೆ ದೇವಳದ ಪ್ರಕಟಣೆ ತಿಳಿಸಿದೆ.

ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕ ದೃಢೀಕರಿಸುವ ದಾಖಲೆ, ಪಾಸ್ಪೋರ್ಟ್ ಅಳತೆಯ 2 ಫೋಟೊ, ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ, ವಧು-ವರರ ಬ್ಯಾಂಕ್ ಖಾತೆಯ ವಿವರ ಮತ್ತು ಅವಿವಾಹಿತರು ಎಂಬುದಾಗಿ ಗ್ರಾಮ ಪಂಚಾಯಿತಿಯಿಂದ ಅಥವಾ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಯಿಂದ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಫೆ.20ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು. ಫೆ.28 ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕವಾದರೆ, ಮಾರ್ಚ್ 3ರಂದು ವಧು–ವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಮಾರ್ಚ್ 12ರಂದು ಬೆಳಿಗ್ಗೆ 11.30ರಿಂದ 12.00ರ ವೃಷಭ ಲಗ್ನ ಮುಹೂರ್ತದಲ್ಲಿವಿವಾಹ ನೆರವೇರಲಿವೆ. ಮಾಹಿತಿಗೆ 08257-281224, 236200, 281700, 281265 ಸಂಪರ್ಕಿಸಬಹುದು.

- Advertisement -

Related news

error: Content is protected !!