Saturday, April 20, 2024
spot_imgspot_img
spot_imgspot_img

ಮಾರ್ಚ್ 21 ಕ್ಕೆ ಅಪ್ಪಳಿಸಲಿದೆ ಈ ವರ್ಷದ ಮೊದಲ ಚಂಡಮಾರುತ..!

- Advertisement -G L Acharya panikkar
- Advertisement -

2022 ರ ಮೊದಲ ಚಂಡಮಾರುತ ಮಾರ್ಚ್ 21 ರಂದು ಅಂಡಮಾನ್ ಮತ್ತು ನಿಕೋಬಾರ್‌ಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಚಂಡಮಾರುತ್ತಕ್ಕೆ ಅಸನಿ ಎಂದು ಹೆಸರಿಡಲಾಗಿದೆ. ಇದು ಅಂಡಮಾನ್‌ ದ್ವೀಪಕ್ಕೆ ಅಪ್ಪಳಿಸಿದ ನಂತರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ಚಲಿಸಲಿದೆ.

ಬಂಗಾಳಕೊಲ್ಲಿಯ ಆಗ್ನೇಯ ಪ್ರದೇಶದಲ್ಲಿನ ಕಡಿಮೆ ಒತ್ತಡದ ಕಾರಣದಿಂದ ಮಾರ್ಚ್ 21 ರ ವೇಳೆಗೆ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಮಾರ್ಚ್ 19 ರ ಶನಿವಾರ ಆಗಮಿಸಲಿದೆ.

ಆನಂತರ ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ, ಮಾರ್ಚ್ 20 ರ ಬೆಳಗಿನ ವೇಳೆಗೆ ಇದು ತೀವ್ರಗೊಳ್ಳುತ್ತದೆ ಮತ್ತು ಮಾರ್ಚ್ 21 ರಂದು ಚಂಡಮಾರುತವಾಗಿ ರೂಪಗೊಳ್ಳುತ್ತದೆ. ಮಾರ್ಚ್ 22 ರ ಬೆಳಿಗ್ಗೆ ಬಾಂಗ್ಲಾದೇಶ-ಉತ್ತರ ಮ್ಯಾನ್ಮಾರ್ ಕರಾವಳಿಯ ಬಳಿ ತಲುಪುವ ಸಾಧ್ಯತೆಯಿದೆ. ಪ್ರಸ್ತುತ ಸಮುದ್ರದ ಪರಿಸ್ಥಿತಿ ಸಾಧಾರಣದಿಂದ ಪ್ರಕ್ಷುಬ್ಧವಾಗಿದೆ.

- Advertisement -

Related news

error: Content is protected !!