Tuesday, May 7, 2024
spot_imgspot_img
spot_imgspot_img

ಮುಂದುವರಿದ ರಷ್ಯಾ-ಉಕ್ರೇನ್ ಸಂಘರ್ಷ: ಶಾಂತಿ ಮಾತುಕತೆಗೆ ಪ್ರಧಾನಿ ಮೋದಿ ಒತ್ತಾಯ

- Advertisement -G L Acharya panikkar
- Advertisement -

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರಿದಿರುವ ನಡುವೆಯೇ ಶುಕ್ರವಾರ ನಡೆದ ಕ್ವಾಡ್ ನಾಯಕರ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಾಂತಿ ಮಾತುಕತೆಗೆ ಒತ್ತಾಯ ಮಂಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

vtv vitla
vtv vitla

ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನುಎಲ್ಲ ರಾಷ್ಟ್ರಗಳು ಗೌರವಿಸಬೇಕು. ರಷ್ಯಾ-ಉಕ್ರೇನ್ ನಡುವೆ ಏರ್ಪಟ್ಟಿರುವ ಸಮರಕ್ಕೆ ಸಂಬಂಧಿಸಿದಂತೆ ಶಾಂತಿ ಮಾತುಕತೆ ಅಗತ್ಯವಾಗಿದೆ ಎಂದು ಮೋದಿ ಹೇಳಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವುದು ತಮ್ಮ ಉದ್ದೇಶವಾಗಿದೆ. ಇದರ ಮೇಲೆ ಕ್ವಾಡ್ ಗಮನಹರಿಸಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.

- Advertisement -

Related news

error: Content is protected !!