Friday, March 29, 2024
spot_imgspot_img
spot_imgspot_img

ಮುಖದ ಕಾಂತಿ ಹೆಚ್ಚಿಸಲು ನ್ಯಾಚುರಲ್ ಬ್ಯೂಟಿ ಟಿಪ್ಸ್

- Advertisement -G L Acharya panikkar
- Advertisement -

ಸೌಂದರ್ಯದ ಪ್ರದರ್ಶನಕ್ಕೆ ಅಡ್ಡ ಬರುತ್ತಿರುವ ಯಾವುದೇ ಕಪ್ಪು ಕಲೆಗಳು, ಸುಕ್ಕು ಮತ್ತು ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತವೆ. ಆದರೆ ಒಂದು ನೆನಪಿನಲ್ಲಿಡಬೇಕಾದ ವಿಷಯವೆಂದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಯಾವುದೇ ಸೌಂದರ್ಯ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳಿಂದ ತುಂಬಿವೆ. ಬಹಳ ದಿನಗಳ ನಿರಂತರ ಉಪಯೋಗದಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಇನ್ನಿತರ ತೊಡಕುಗಳಿಗೆ ಕಾರಣವಾಗಬಹುದು.

ಇದಕ್ಕೆ ಪೂರಕವೆಂಬಂತೆ ಅನೇಕ ನೈಸರ್ಗಿಕ ಉತ್ಪನ್ನಗಳೂ ಕೂಡ ಮಾರುಕಟ್ಟೆಯಲ್ಲಿ ಬಂದು ನಿಂತಿವೆ. ಪ್ರಪಂಚದ ವಿವಿಧ ವೈವಿಧ್ಯಮಯ ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿನ ಸ್ಥಳೀಯ ಪದಾರ್ಥಗಳನ್ನು ಬಳಸಿ ಅದ್ಭುತ ಮತ್ತು ಅತ್ಯಂತ ಪರಿಣಾಮಕಾರಿಯಾದ ಬ್ಯೂಟಿ ಪ್ರಾಡಕ್ಟ್ ಗಳನ್ನು ತಯಾರು ಮಾಡಿದ್ದಾರೆ. ಆದರೆ ಇವುಗಳಿಗೆ ಹೆಚ್ಚಿನ ಸಮಯ ಮತ್ತು ಶ್ರಮ ಬೇಕಾಗುತ್ತದೆ.

ಜೊತೆಗೆ ಇವುಗಳ ಬಳಕೆಯಿಂದ ನಿಮ್ಮ ನೈಜ ಸೌಂದರ್ಯ ಮರೆಮಾಚುತ್ತದೆ. ನಿಮ್ಮ ಮೂಲ ಸೌಂದರ್ಯವನ್ನು ಮತ್ತು ಮುಖದ ಹೊಳಪನ್ನು ಪ್ರದರ್ಶಿಸಬೇಕಾದರೆ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ಇವುಗಳು ನೈಸರ್ಗಿಕವಾಗಿ ನಿಮ್ಮನ್ನು ಸುಂದರವಾಗಿ ಕಾಣಲು ಸಹಾಯ ಮಾಡುತ್ತವೆ. ಕೇವಲ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಸಣ್ಣ ಬದಲಾವಣೆಗಳು ಆಗಬೇಕಷ್ಟೇ. ನಿಮ್ಮ ಹೊಸ ರೀತಿಯ ಸೌಂದರ್ಯ ನಿಮ್ಮನ್ನೇ ಬೆರಗು ಮಾಡುತ್ತದೆ.

ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಿ

ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಿ
ಕರಿದ ತಿಂಡಿಗಳು, ಸಂಸ್ಕರಿಸಿದ ಆಹಾರಗಳು ಮತ್ತು ಆಮ್ಲಿಯ ಆಹಾರ ಪದಾರ್ಥಗಳು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸದಾ ಪೌಷ್ಟಿಕತೆ ತುಂಬಿರುವ ಆಹಾರಗಳ ಸೇವನೆಗೆ ಒತ್ತು ಕೊಡಬೇಕು. ಸಸ್ಯಾಹಾರಿ ಆಹಾರಗಳು ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಬಹಳ ಸಹಕಾರಿ. ಜೊತೆಗೆ ಆರೋಗ್ಯಕರ ಕೂದಲು ಸಹ ನಿಮ್ಮದಾಗುತ್ತದೆ. ಆದ್ದರಿಂದ ನಿಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಆದಷ್ಟು ಹೆಚ್ಚಿನ ತರಕಾರಿಗಳನ್ನು ಜೊತೆಗೆ ಹಣ್ಣುಗಳನ್ನು ಬಳಕೆ ಮಾಡಿ. ಹಸಿರು ಎಲೆ – ತರಕಾರಿಗಳ ಮಹತ್ವವನ್ನು ಮರೆಯಬೇಡಿ. ಹಲವಾರು ದ್ವಿದಳ ಧಾನ್ಯಗಳು, ಕಾಳುಗಳು, ಬೀಜಗಳು ನಿಮ್ಮ ಆಹಾರದಲ್ಲಿ ಸೇರಿರಲಿ.

ನಿತ್ಯ ನಿಯಮಿತ ವ್ಯಾಯಾಮ

ನಿಮ್ಮ ನೈಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮದಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗುತ್ತವೆ. ನಿಮ್ಮ ಮಾಂಸ ಖಂಡಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಪ್ರತಿ ದಿನ 30 ನಿಮಿಷಗಳ ಕಾಲ ವಾಕಿಂಗ್, ಜಾಗಿಂಗ್ ಮತ್ತು ಜಿಮ್ ಗೆ ಮೀಸಲಿಡಿ. ಕೆಲ ದಿನಗಳು ಕಳೆದ ನಂತರ ನಿಮ್ಮ ಮುಖದ ಕಾಂತಿಯ ಬಗ್ಗೆ ನೀವೇ ಆಶ್ಚರ್ಯ ವ್ಯಕ್ತಪಡಿಸುವಿರಿ.

ಕ್ರೀಮ್, ಪೌಡರ್ ಸೈಡ್‌ಗೆ ಹಾಕಿ ‘ಅಲೋವೆರಾ ಜೆಲ್’ ಉಪಯೋಗಿಸಿ ನೋಡಿ

ಸನ್ ಸ್ಕ್ರೀನ್ ಉಪಯೋಗದ ಬಗ್ಗೆ ತಿಳಿದುಕೊಳ್ಳಿ
ಮನೆಯ ಹೊರಗಡೆ ಹೊರಟಾಗ ಸೂರ್ಯನ ಅತಿ ನೇರಳೆ ಕಿರಣಗಳು ಮುಖದ ಚರ್ಮದ ಕಾಂತಿಯನ್ನು ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ತುಂಬಾ ಹೊತ್ತು ಸೂರ್ಯನ ಬಿಸಿಲಿಗೆ ಮುಖ ಒಡ್ಡುವುದರಿಂದ ಮುಖದ ಚರ್ಮದ ಮೇಲೆ ಸುಕ್ಕು, ಕಲೆಗಳು ಮತ್ತು ಇನ್ನಿತರ ಚರ್ಮ ಸಂಬಂಧಿತ ಸಮಸ್ಯೆಗಳು ಶುರುವಾಗುತ್ತವೆ. ಇದರಿಂದ ನಿಮ್ಮ ಮುಖದ ಕಾಂತಿ ಸಹಜವಾಗಿಯೇ ಕುಂಠಿತವಾಗುತ್ತದೆ. ಆದ್ದರಿಂದ ಮನೆಯ ಹೊರಗಡೆ ನಿಮ್ಮ ಮುಖದ ಚರ್ಮವನ್ನು ಕಾಪಾಡಿಕೊಳ್ಳುವತ್ತ ಮೊದಲು ಗಮನ ಹರಿಸಿ.

ದಾಳಿಂಬೆ, ಸಿಹಿ ಬಾದಾಮಿ ಮತ್ತು ರಾಸ್ಪ್ಬೆರಿ ಆಯಿಲ್

ದಾಳಿಂಬೆ, ಸಿಹಿ ಬಾದಾಮಿ ಮತ್ತು ರಾಸ್ಪ್ಬೆರಿ ಆಯಿಲ್
ನಿಮ್ಮ ಮುಖದ ಚರ್ಮ ನೈಸರ್ಗಿಕವಾಗಿ ಸುಂದರವಾಗಿ ಕಾಣಬೇಕಾದರೆ ಈ ಮೂರೂ ಆಹಾರ ಪದಾರ್ಥಗಳ ಮಿಶ್ರಣದ ಆಯಿಲ್ ನ ಉಪಯೋಗ ಮಾಡುವುದು ಅತ್ಯವಶ್ಯಕ. ಇದು ನಿಮ್ಮ ಒಣ ಚರ್ಮಕ್ಕೆ ತೇವಾಂಶವನ್ನು ಒದಗಿಸುವುದಲ್ಲದೆ, ಚರ್ಮದ ಮೇಲ್ಭಾಗದಲ್ಲಿ ಹೆಚ್ಚಿನ ಹೊಳಪನ್ನು ತಂದುಕೊಡುತ್ತದೆ. ಈ ಆಯಿಲ್ ನ ಸರಿಯಾದ ರೀತಿಯ ಉಪಯೋಗ ನಿಮಗೆ ಆಗಬೇಕಾದರೆ ಮೊದಲು ಮುಖಕ್ಕೆ ಹಾಕಿರುವ ಮೇಕಪ್ ತೆಗೆಯಿರಿ. ನಂತರ ಮೂರರಿಂದ ಆರು ಹನಿಗಳಷ್ಟು ಆಯಿಲ್ ಮಿಶ್ರಣವನ್ನು ಅಂಗೈಯ ಮೇಲೆ ಹಾಕಿಕೊಂಡು ಸ್ವಲ್ಪ ಬಿಸಿ ಬರುವವರೆಗೆ ಎರಡು ಕೈಗಳನ್ನು ಉಜ್ಜಿ ನಂತರ ಮುಖದ ಮೇಲೆ ಅಪ್ಲೈ ಮಾಡಿ. ನಿಮ್ಮ ಕೈ ಬೆರಳುಗಳ ತುದಿಯಿಂದ ಮೆತ್ತಗೆ ಒತ್ತಿ ಮಸಾಜ್ ಮಾಡಿ. ಇದರಿಂದ ಮುಖದ ಮೇಲಿನ ಗೆರೆಗಳು ಮತ್ತು ಸುಕ್ಕುಗಳು ಮಾಯವಾಗುತ್ತವೆ.

ಅರಿಶಿನ ಪುಡಿ

ಶುದ್ಧ ಅರಿಶಿನವು ನಂಜುನಿರೋಧಕ ಎಂದು ಹೆಸರುವಾಸಿಯಾಗಿದೆ. ಮೊಡವೆಗಳ ವಿರುದ್ಧ ಹೋರಾಡುವ ಶಕ್ತಿ ಇರುವುದೂ ಅರಿಶಿನಕ್ಕೆ. ಇದು ಮುಖದ ಮೇಲೆ ಬೆಳೆವ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಅಷ್ಟೇ ಏಕೆ, ಅಂಡರ್ ಆರ್ಮ್ ಗೆ ಅರಿಶಿನ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಜೊತೆಗೆ, ಇದು ಸೋಂಕು ಉಂಟಾಗದಂತೆ ತಡೆಯುತ್ತದೆ, ಜೊತೆಗೆ ವಾಸನೆಯನ್ನು ತೊಲಗಿಸುತ್ತದೆ. ಮಜ್ಜಿಗೆ ಅಥವಾ ಕಬ್ಬಿನ ರಸದ ಜೊತೆಗೆ ಅರಿಶಿನ ಪುಡಿ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಕಣ್ಣಿನ ಕೆಳಗೆ, ಮುಖದ ಮೇಲೆ ಚೆನ್ನಾಗಿ ಹಚ್ಚಿ. ಇದು ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಹೋಗಲಾಡಿಸಿ ಮುಖ ಸುಕ್ಕಗಾದಂತೆ ನೋಡಿಕೊಳ್ಳುತ್ತದೆ.

ಮಲಗುವಾಗ ಮೆತ್ತನೆಯ ದಿಂಬು ಉಪಯೋಗಿಸಿ
ಸೌಂದರ್ಯ ವೃದ್ಧಿಗಾಗಿ ಮನುಷ್ಯನಿಗೆ ನಿದ್ರೆ ಬಹಳ ಅವಶ್ಯಕ. ವೈದ್ಯರ ಸಲಹೆಯಂತೆ ಎಂಟು ಗಂಟೆಗಳ ಸಂಪೂರ್ಣ ನಿದ್ರಾ ಸಮಯ ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕು. ನಿದ್ರೆ ಚೆನ್ನಾಗಿ ಬರಬೇಕಾದರೆ ತಲೆಗೆ ಹಾಕಿಕೊಳ್ಳುವ ಮೆತ್ತಗೆ ಮತ್ತು ಮೃದುವಾಗಿರಬೇಕು. ಈ ರೀತಿಯ ದಿಂಬಿನಿಂದ ಮುಖದ ಚರ್ಮಕ್ಕೆ ಸಹ ಒಳ್ಳೆಯದಾಗುತ್ತದೆ. ಅತ್ತಿತ್ತ ಹೊರಳಾಡಿದಾಗ ನಮ್ಮ ಮುಖದ ಚರ್ಮ ಮತ್ತು ದಿಂಬಿನ ಮೇಲಿನ ಬಟ್ಟೆ ಮಧ್ಯದಲ್ಲಿ ಯಾವುದೇ ಫ್ರಿಕ್ಷನ್ ಉಂಟಾಗುವುದಿಲ್ಲ. ಇದರಿಂದ ಚರ್ಮದ ಆರೋಗ್ಯಕ್ಕೆ ಯಾವುದೇ ತೊಂದರೆ ಅಥವಾ ಹಾನಿಯಾಗುವುದಿಲ್ಲ.

ಎಳನೀರಿನ ಸೇವನೆಯಿಂದ ಮುಖದ ಕಾಂತಿ

ಎಳನೀರಿನ ಸೇವನೆಯಿಂದ ಮುಖದ ಕಾಂತಿ
ಹೌದು ಇದು ಕೇಳಲು ಆಶ್ಚರ್ಯವೆನಿಸಿದರೂ ಸತ್ಯ. ಎಳನೀರು ನಮ್ಮ ದೇಹಕ್ಕೆ ತಂಪನ್ನು ಒದಗಿಸುತ್ತದೆ ಜೊತೆಗೆ ನಮ್ಮ ದೇಹವನ್ನು ಹೆಚ್ಚಿನ ನೀರಿನ ಅಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣವಿದ್ದರೆ, ದೇಹದ ದಿನ ನಿತ್ಯದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜೊತೆಯಲ್ಲಿ ದೇಹದ ಮೇಲಿನ ಚರ್ಮದಲ್ಲಿ ನೀರಿನ ಅಂಶದ ಕೊರತೆ ಕಾಣುವುದಿಲ್ಲ. ಇದರಿಂದ ಚರ್ಮ ಒಣ ಚರ್ಮವಾಗಿ ಬದಲಾಗುವುದು ತಪ್ಪುತ್ತದೆ. ಮುಖದ ಮೇಲೂ ಅಷ್ಟೇ ಯಾವುದೇ ಸುಕ್ಕುಗಳು ಅಥವಾ ಚರ್ಮ ಸಂಬಂಧಿತ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.

ಎರಡು ಚಮಚ ಕಡ್ಲೆಹಿಟ್ಟು

ಎರಡು ದೊಡ್ಡ ಚಮಚ ಕಡ್ಲೆಹಿಟ್ಟು, ಕೆಲವು ತೊಟ್ಟು ಲಿಂಬೆರದ ಮತ್ತು ಒಂದು ದೊಡ್ಡ ಚಮಚ ಹಾಲಿನ ಕೆನೆ ಇಷ್ಟನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗತಾನೇ ಚೆನ್ನಾಗಿ ತೊಳೆದುಕೊಂಡು ಗುಲಾಬಿ ನೀರಿನಿಂದ ಅಥವಾ ಕ್ಲೀನ್ಸರ್ ದ್ರಾವಣದಿಂದ ಒತ್ತಿ ಒರೆಸಿಕೊಂಡ ಮುಖಕ್ಕೆ ಈ ಲೇಪವನ್ನು ಮುಖದ ತುಂಬಾ ಹಚ್ಚಿಕೊಳ್ಳಿ, ಹೊರಗಿವಿಯ ಸಹಿತ. ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಂಡು ಹೊಳೆಯುವ ತ್ವಚೆಯನ್ನು ಗಮನಿಸಿ.

- Advertisement -

Related news

error: Content is protected !!