Thursday, May 2, 2024
spot_imgspot_img
spot_imgspot_img

ಮುಡಿಪು: ಅಕ್ರಮ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ; ಇಬ್ಬರು ಪೊಲೀಸ್ ವಶಕ್ಕೆ!

- Advertisement -G L Acharya panikkar
- Advertisement -

ಕೊಣಾಜೆ: ಅಕ್ರಮ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಹಸುಗಳನ್ನು ಕೊಣಾಜೆ ಪೊಲೀಸರು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ಮುಡಿಪು ಜವಾಹರಲಾಲ್ ನವೋದಯ ವಿದ್ಯಾಲಯದ ಬಳಿಯ ಪೂಪಾಡಿಕಲ್ಲು ಕ್ರಾಸ್ ನಲ್ಲಿ ನಡೆದಿದೆ.

ಯಾವುದೇ ದಾಖಲೆ ಇಲ್ಲದೆ ಎರಡು ಹಸುಗಳನ್ನು ಕರ್ನಾಟಕ – ಕೇರಳಗಡಿ ಪ್ರದೇಶ ಮರೀಕಳ ಎಂಬಲ್ಲಿರುವ ಅಕ್ರಮ ಕಸಾಯಿಖಾನೆಗೆ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಬಜರಂಗದಳ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ಪಿಕ್ ಅಪ್ ವಾಹನವನ್ನು ತಡೆದು ಹಸುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪಿಕ್ ಅಪ್ ವಾಹನದಲ್ಲಿದ್ದಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

driving
- Advertisement -

Related news

error: Content is protected !!