Sunday, June 29, 2025
spot_imgspot_img
spot_imgspot_img

ಮುಲ್ಕಿ: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

- Advertisement -
- Advertisement -

ಮುಲ್ಕಿ: ಕಾಲೇಜು ವಿದ್ಯಾರ್ಥಿಯೋರ್ವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮುಲ್ಕಿ ಸಮೀಪದ ಕಕ್ವಪಲ್ಕೆ ನಿವಾಸಿ ಕಿಶನ್ ಆಚಾರ್ಯ (18) ಎಂದು ಗುರುತಿಸಲಾಗಿದೆ.

ಮೃತ ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು ಮಂಗಳವಾರ ಕಕ್ವಪಲ್ಕೆಯಲ್ಲಿರುವ ದೊಡ್ಡಪ್ಪನ ಮನೆಯ ಕೋಣೆಯಲ್ಲಿ ಕಿಟಿಕಿಗೆ ಸೀರೆಯ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈತ ಕಾಲೇಜಿನಲ್ಲಿ ಎಲ್ಲರ ಜೊತೆ ಒಡನಾಡಿಯಾಗಿದ್ದ ಎಂದು ತಿಳಿದು ಬಂದಿದೆ.

ಈ ನಡುವೆ ಪ್ರಕರಣದ ಬಗ್ಗೆ ದೂರು ನೀಡಲು ಮೃತನ ಮನೆಯವರು ಹಾಗೂ ಸಂಬಂಧಿಕರು ತೆರಳಿದಾಗ ಮುಲ್ಕಿ ಪೊಲೀಸರು ಸತಾಯಿಸಿದ್ದು, ಬಳಿಕ ಶಾಸಕ ಸೂಚನೆ ಮೇರೆಗೆ ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ. ಮೃತ ಕಿಶನ್ ಆಚಾರ್ಯ ತಂದೆ ತಾಯಿ ಹಾಗೂ ಅಕ್ಕ ರವರನ್ನು ಅಗಲಿದ್ದಾರೆ. ಮೃತ ಕಿಶನ್ ಗೌರವಾರ್ಥ ಕಾಲೇಜಿಗೆ ರಜೆ ಘೋಷಿಸಲಾಗಿದೆ.

- Advertisement -

Related news

error: Content is protected !!