Tuesday, June 9, 2026
spot_imgspot_img
spot_imgspot_img

ಧಗಧಗನೇ ಹೊತ್ತಿ ಉರಿದ ಕಾರು – ಓರ್ವ ಸಜೀವ ದಹನ

- Advertisement -
- Advertisement -

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಾರುತಿ ಎಕ್ಸ್ಎಲ್ 6 ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ನೆಲಮಂಗಲದ ಅಂಚೇಪಾಳ್ಯದ ಬಳಿ ನಡೆದಿದೆ.

ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಓರ್ವ ವ್ಯಕ್ತಿ ಹೊರಗಡೆ ಬರಲು ಸಾಧ್ಯವಾಗದೇ ಕೂತಲ್ಲೇ ಸಜೀವ ದಹನವಾಗಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಧಗಧಗನೇ ಹೊತ್ತಿ ಉರಿದು ಭಸ್ಮವಾಗಿದೆ.

ಹೈಬ್ರಿಡ್/ಪೆಟ್ರೋಲ್ ಎಕ್ಸ್ಎಲ್ 6 ಕಾರು ಅನಿಲ್ ಕುಮಾರ್ ಟಿ ಅವರಿಗೆ ಸೇರಿದ್ದು, ಬೆಂಗಳೂರು ಉತ್ತರ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ.

- Advertisement -

Related news

error: Content is protected !!