Thursday, March 28, 2024
spot_imgspot_img
spot_imgspot_img

ಮುಸ್ಲಿಂ ಯುವಕನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಹಿಂದೂ ಯುವಕನಿಂದ ದೇವಿಯ ಅವಹೇಳನ – ಕೊಡವರಿಗೆ ಅವಮಾನ

- Advertisement -G L Acharya panikkar
- Advertisement -

ಕೊಡಗು: ಮುಸ್ಲಿಮ್ ಯುವಕನೋರ್ವನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಹಿಂದೂ ಯುವಕ ಕೊಡವರ ಕುಲದೇವಿ ಕೊಡಗಿನ ಆರಾಧ್ಯ ದೇವತೆ ಕಾವೇರಮ್ಮಮಾತೆ ಮತ್ತು ಕೊಡವ ಸಮುದಾಯದ ಹೆಣ್ಣು ಮಕ್ಕಳನ್ನು ಅವಮಾನ ಮಾಡಿ ತುಚ್ಛವಾಗಿ ಪೋಸ್ಟ್ ಹಾಕಿದ್ದ ಕಾರಣ ಆತನನ್ನ ಬಂಧಿಸಲಾಗಿದೆ.

ದಿವಿನ್ ದೇವಯ್ಯ (29)

ಆರೋಪಿಯನ್ನ ದಿವಿನ್ ದೇವಯ್ಯ ಗುರುತಿಸಲಾಗಿದ್ದು, ಈತ ಸಿದ್ದಾಪುರದ ಯುವಕ ಮೊಹಮದ್ ಅಷ್ಪಾಕ್ ಎಂಬ ಫೇಕ್ ಅಕೌಂಟ್ ಸೃಷ್ಟಿ ಮಾಡಿದ್ದ ಹಿಂದೂ ಯುವಕ ತಾಯಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳ ಬಗ್ಗೆ ಪೋಸ್ಟ್ ಹಾಕಿದ್ದು ಅದು ವೈರಲ್ ಆದ ನಂತರ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡು ಪ್ರತಿಭಟನೆಯ ಹಾದಿ ಮತ್ತು ನೈಜ ಅಪರಾಧಿಯನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.

ಕೊಡಗಿನ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಫೇಸ್ ಬುಕ್ ಮುಂಬೈ ಕಚೇರಿ ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿ ಸಂಪರ್ಕಿಸಿ ನೈಜ ಅಪರಾಧಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಡವರ ಕುಲದೇವಿ ಕಾವೇರಿ ಮತ್ತು ಕೊಡವ ಯುವತಿಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಸಂಬಂಧ ಬಂಧಿತ ಆರೋಪಿಯನ್ನು ಕೆದಮುಳ್ಳೂರು ಗ್ರಾಮದ ಕರಿನೆರವಂಡ ಸಿ ದಿವಿನ್ ದೇವಯ್ಯ (29) ಎಂದು ತಿಳಿದುಬಂದಿದೆ.

- Advertisement -

Related news

error: Content is protected !!