Monday, June 22, 2026
spot_imgspot_img
spot_imgspot_img

ಮೂಡಬಿದಿರೆ: ಕಾರು ಬೈಕ್ ಅಪಘಾತ – ಸವಾರ ಮೃತ್ಯು

- Advertisement -
- Advertisement -

ಮೂಡಬಿದಿರೆ: ಕಾರು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಶಿಪಟ್ಣದ ಉಮೇಶ್ (೪೯) ಮೃತಪಟ್ಟ ಬೈಕ್ ಸವಾರ.

ಉಮೇಶ್ ಅವರು ಮೂಡಬಿದಿರೆ ಕಡೆಯಿಂದ ಮಹಾವೀರ ಕಾಲೇಜು ರಸ್ತೆಗೆ ಹೋಗುತ್ತಿದ್ದಾಗ, ಜ್ಯೋತಿನಗರ ಕ್ರಾಸ್‌ ಆಗಿ ಲಾಡಿಗೆ ಹೋಗುವ ವೇಳೆ ಬಂಟ್ವಾಳದಿಂದ ಮೂಡಬಿದಿರೆ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಉಮೇಶ್ ಅವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಉಮೇಶ್ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!