Thursday, May 2, 2024
spot_imgspot_img
spot_imgspot_img

ಮೂಡುಬಿದಿರೆಯಿಂದ ಲಡಾಕ್‌ಗೆ ಯುವಕನ ಸೈಕಲ್‌ ಯಾತ್ರೆ; ದಿನಕ್ಕೆ 100 ಕಿ.ಮೀ. ಪಯಣ..!

- Advertisement -G L Acharya panikkar
- Advertisement -

ಮೂಡುಬಿದಿರೆ: ನೈಸರ್ಗಿಕ ವಿಸ್ಮಯಗಳ ಮೂಲಕ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಲಡಾಕ್‌ಗೆ ಮೂಡುಬಿದಿರೆಯ ಯುವಕನೊಬ್ಬ ಸೋಮವಾರ ಸೈಕಲ್‌ ಯಾತ್ರೆ ಆರಂಭಿಸಿದ್ದಾರೆ.

ಪ್ರಾಂತ್ಯ ಗ್ರಾಮದ ಲಾಡಿ ಲತೀಫ್‌ ಮಂಜಿಲ್‌ ನಿವಾಸಿ ಅಬೂಬಕ್ಕರ್‌ ಅವರ ಪುತ್ರ 18 ವರ್ಷ ವಯಸ್ಸಿನ ಮಹ್ಮದ್‌ ಆರಿಫ್‌ ಲಡಾಕ್‌ಗೆ ಸೈಕಲ್‌ನಲ್ಲಿ ಪ್ರಯಾಣ ಬೆಳೆಸುವ ಮೂಲಕ ತನ್ನ ಕೆಲವು ವರ್ಷಗಳ ಕನಸನ್ನು ಕೊನೆಗೂ ಸಾಕಾರಗೊಳಿಸಿದ್ದಾರೆ.

ಮೂಡುಬಿದಿರೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಹೊರಟು ಮೂಲ್ಕಿ – ಉಡುಪಿ – ಭಟ್ಕಳ – ಅಂಕೋಲ – ಗೋವಾ ಮಾರ್ಗವಾಗಿ ಮುಂಬಯಿಗೆ ತೆರಳಲಿದ್ದಾರೆ. ಅಲ್ಲಿಂದ ಹೊಸದಿಲ್ಲಿ – ಚಂಡೀಗಢ – ಶಿಮ್ಲಾ ಮಾರ್ಗವಾಗಿ ಲಡಾಕ್‌ ತಲುಪಲಿದ್ದಾರೆ.

ದಿನಕ್ಕೆ ನೂರು ಕಿಮೀ ಪ್ರಯಾಣ: ಮೂಡುಬಿದಿರೆಯಿಂದ ಸುಮಾರು 3500 ಕಿಮೀ ದೂರದ ಲಡಾಕ್‌ಗೆ ಸೈಕಲ್‌ನಲ್ಲಿ ತಲುಪಲು ಎರಡು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಿಕೊಂಡಿದ್ದ ಮಹ್ಮದ್‌ ಆರಿಫ್‌, ಅದಕ್ಕಾಗಿ ಎಲ್ಲ ಸಿದ್ಧತೆಗಳೊಂದಿಗೆ ಹೊರಟಿದ್ದು ದಿನಕ್ಕೆ ನೂರು ಕಿಮೀ ಪ್ರಯಾಣದ ಗುರಿ ಇರಿಸಿಕೊಂಡಿದ್ದಾರೆ.

ಅನಾರೋಗ್ಯ ಪೀಡಿತ ತಂದೆಗಾಗಿ 2,100 ಕಿ.ಮೀ. ಸೈಕಲ್‌ ಯಾತ್ರೆ ಹೊರಟ ವಾಚ್‌ಮನ್‌ಸಂಜೆ 7 ಗಂಟೆಗೆ ದಿನದ ಪ್ರಯಾಣ ನಿಲ್ಲಿಸಿ ಹತ್ತಿರದ ಪೆಟ್ರೋಲ್‌ ಬಂಕ್‌, ಲಾಡ್ಜ್‌, ಹೋಟೆಲ್‌ ಆವರಣ ಇನ್ನಿತರ ಸುರಕ್ಷಿತ ಜಾಗ ನೋಡಿ ರಾತ್ರಿ ಉಳಿದುಕೊಳ್ಳಲಿದ್ದಾರೆ. ಮರುದಿನ ಬೆಳಗ್ಗೆ 6 ಗಂಟೆಗೆ ಮತ್ತೆ ಪ್ರಯಾಣ ಮುಂದುವರಿಸಲಿದ್ದಾರೆ.

ತಾನು ಕೆಲಸ ಮಾಡುತ್ತಿದ್ದ ಟೋಟಲ್‌ ಅಲ್ಯೂಮಿನಿಯಂ ಸೆಂಟರ್‌ನ ಮಾಲೀಕರು ಸೇರಿದಂತೆ ಕೆಲವು ಸ್ನೇಹಿತರು ಇವರಿಗೆ ಖರ್ಚಿಗೆ ಹಣ ನೀಡಿದ್ದಾರೆ. ದಾರಿ ಮಧ್ಯೆ ಕೇರಳದ ಕೆಲವು ಯುವಕರು ಈತನ ಜತೆ ಸೇರಲಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!