Monday, June 22, 2026
spot_imgspot_img
spot_imgspot_img

ಮೂಡುಬಿದಿರೆ: ಗೋಣಿಚೀಲದಲ್ಲಿ ಗೋವಿನ ತಲೆ ಪತ್ತೆ; ಹಿಂದು ಜಾಗರಣ ವೇದಿಕೆ ಆಕ್ರೋಶ.!

- Advertisement -
- Advertisement -

ಮೂಡುಬಿದಿರೆ : ಮೂಡುಬಿದಿರೆಯ ಮಹಾವೀರ ಕಾಲೇಜು ಸಮೀಪ ಕೊಡಂಗಲ್ಲು ಕೀರ್ತಿನಗರ ಕ್ರಾಸ್‌ ಎಂಬಲ್ಲಿ ಗೋವಿನ ತಲೆ ಕಡಿದು ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವುದು ಪತ್ತೆಯಾಗಿದೆ.

ಸ್ಥಳಕ್ಕಾಗಮಿಸಿದ ಮೂಡುಬಿದಿರೆ ಪೊಲೀಸರು ಗೋವಿನ ತಲೆಯನ್ನು ತೆರವುಗೊಳಿಸಿದರು.
ಈ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿರುವ ಮೂಡುಬಿದಿರೆಯ ಹಿಂದು ಜಾಗರಣ ವೇದಿಕೆ ಗೋಮಾತೆಯ ತಲೆ ಕಡಿದು ಗೋಣಿಯಲ್ಲಿ ಹಾಕಿ ಹಿಂದುಗಳ ಭಾವನೆ ಜೊತೆ ಚೆಲ್ಲಾಟವಾಡುವ ಮತ್ತು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ದುಷ್ಕರ್ಮಿಗಳು ಯತ್ನಿಸಿರುವಂತೆ ಕಾಣುತ್ತದೆ. ಇದರ ಹಿಂದಿರುವವರನ್ನು 48 ಗಂಟೆಯೊಳಗಾಗಿ ಬಂಧಿಸಬೇಕು, ಇಲ್ಲವಾದರೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾರ್ಕಳ: ಹಟ್ಟಿಯಿಂದ ದನ ಕಳ್ಳತನ; ಪ್ರಕರಣ ದಾಖಲು

vtv vitla
vtv vitla
vtv vitla
vtv vitla
- Advertisement -

Related news

error: Content is protected !!