Saturday, April 20, 2024
spot_imgspot_img
spot_imgspot_img

ಕಡಬ: ಪೇಟೆಯಲ್ಲಿ ಹರಿದಾಡಿದ ಕಲರ್ ಝೆರಾಕ್ಸ್ ನೋಟು..!

- Advertisement -G L Acharya panikkar
- Advertisement -

ಕಡಬ: ಕೋಡಿಂಬಾಳ ಪೇಟೆಯಲ್ಲಿ 100ರ ಝೆರಾಕ್ಸ್ ನೋಟು ಚಲಾವಣೆಯಾಗಿರುವ ಘಟನೆ ನಡೆದಿದೆ. ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲಕ ಚಿಲ್ಲರೆ ನೀಡುವ ವೇಳೆ ಝೆರಾಕ್ಸ್ ಮಾಡಿಸಿದ 100ರ ನಕಲಿ ನೋಟು ನೀಡಿದ್ದಾನೆ.

ಅಸಲಿ ನೋಟನ್ನೇ ಹೋಲುವ 100 ರೂ ಕಲರ್‌ ಜೆರಾಕ್ಸ್‌ ನೋಟನ್ನು ಅಂಗಡಿಯಿಂದ ಪಡೆದ ಗ್ರಾಹಕ ಬಳಿಕ ಆಟೋದಲ್ಲಿ ಪ್ರಯಾಣಿಸುವಾಗ ಅದನ್ನು ಆಟೋ ಚಾಲಕ ರಾಜೇಶ್‌ ಅವರಿಗೆ ನೀಡಿದ್ದ. ನೋಟು ನಕಲಿ ಎಂದು ಪತ್ತೆ ಮಾಡಿದ ಆಟೋ ಚಾಲಕ ರಾಜೇಶ್‌ ಕಡಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕೋಳಿ ಮಾಂಸದ ಅಂಗಡಿಗೆ ತೆರಳಿ ಅಂಗಡಿ ಮಾಲಕ ಅಶ್ರಫ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ. ಯಾರೋ ಗ್ರಾಹಕರು ನೀಡಿದ ನೋಟನ್ನು ಸರಿಯಾಗಿ ಗಮನಿಸಿದೆ ಅಸಲಿ ಎಂದೇ ತಿಳಿದು ನಾನು ಇನ್ನೋರ್ವ ಗ್ರಾಹಕನಿಗೆ ನೀಡಿದ್ದೆ ಎಂದು ಅಶ್ರಫ್‌ ವಿವರಣೆ ನೀಡಿದ್ದಾರೆ.

- Advertisement -

Related news

error: Content is protected !!