Saturday, June 28, 2025
spot_imgspot_img
spot_imgspot_img

ಮೂಡುಬಿದಿರೆ : ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದಾತ ಪೊಲೀಸರ ಅತಿಥಿಯಾದ…!!

- Advertisement -
- Advertisement -

ಮೂಡುಬಿದಿರೆ : ಮಹಿಳೆಯ ಧ್ವನಿಯನ್ನು ಅನುಕರಣೆ ಮಾಡಿ ವ್ಯಕ್ತಿಗೆ ಕರೆ ಮಾಡಿ ಬ್ಲ್ಯಾಕ್ ಮೇಲೆ ಹಣ ಪೀಕಿಸಿದ ವ್ಯಕ್ತಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೂಡುಬಿದಿರೆ ಸಮೀಪದ ಬಿರಾವು ಧನಂಜಯ ಎಂದು ಗುರುತಿಸಲಾಗಿದೆ.

ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿ ಹೊಸಬೆಟ್ಟು ನಿವಾಸಿಯೋರ್ವರಿಗೆ ಉಷಾ ಎಂದು ಪರಿಚಯಿಸಿಕೊಂಡು ಹೆಣ್ಣಿನ ಸ್ವರದಲ್ಲಿ ಕರೆ, ವೀಡಿಯೋ ಕಾಲ್‌ ಮಾಡಿ, ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪ ಈತನ ಮೇಲಿದೆ

ಆರೋಪಿ ಬಿರಾವು ಧನಂಜಯವು, ಹೊಸಬೆಟ್ಟು ನಿವಾಸಿಗೆ ಕರೆ ಮಾಡಿ 25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಕಂಗಾಲಾಗಿ ಸಂತ್ರಸ್ತರು ಒಮ್ಮೆ 2 ಸಾವಿರ ಗೂಗಲ್‌ ಪೇ ಮಾಡಿದ್ದರು. ಬಳಿಕವೂ ಪದೇಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಕೊನೆಗೆ ಸುರತ್ಕಲ್‌ ಠಾಣೆಗೆ ದೂರು ನೀಡಿದರು. ಸುರತ್ಕಲ್‌ ಪೊಲೀಸರು ಉಷಾ ಹೆಸರಿನ ಧನಂಜಯನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!