- Advertisement -
- Advertisement -
ಬೆಂಗಳೂರು: ಕಳೆದ ರಾತ್ರಿ ಕೆ.ಜಿ.ಹಳ್ಳಿ ಹಾಗೂ ಡಿ.ಜೆ ಹಳ್ಳಿ ಯಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಫೈರಿಂಗ್ ನಲ್ಲಿ ಮೃತರಾದ ಮೂವರ ಅಂತ್ಯಕ್ರಿಯೆಗೆ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ.
ಶವಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು, ಅಂತಿಮ ದರ್ಶನಕ್ಕೆ ಇಡುವಂತಿಲ್ಲ ಎಂದು ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ. ಆಸ್ಪತ್ರೆಯಿಂದ ನೇರವಾಗಿ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಮೂವರ ಪೈಕಿ ಓರ್ವನಿಗೆ ಕೊರೊನಾ ದೃಢ:
ಬೌರಿಂಗ್ ಆಸ್ಪತ್ರೆಯ ಶವಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆಗೆ ಎಫ್ ಎಸ್ ಎಲ್ ವೈದ್ಯರ ತಂಡ ಆಗಮಿಸಿತ್ತು. ಮರಣೋತ್ತರ ಪರೀಕ್ಷೆಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಓರ್ವನ ವರದಿ ಪಾಸಿಟಿವ್ ಬಂದಿದೆ. 20 ವರ್ಷದ ವಾಜಿದ್ ಖಾನ್ ಕೊರೊನಾ ವರದಿ ಪಾಸಿಟಿವ್ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
- Advertisement -