Saturday, May 18, 2024
spot_imgspot_img
spot_imgspot_img

“ಮೂರು ವರ್ಷದ ಮಕ್ಕಳಿಗೆ ಟಿಕೆಟ್” ಸುಳ್ಳು ಸುದ್ದಿ; ಕ.ರಾ.ರ.ಸಾ.ನಿಗಮ ಸ್ಪಷ್ಟನೆ

- Advertisement -G L Acharya panikkar
- Advertisement -

ಮಂಗಳೂರು: ಇತ್ತೀಚೆಗೆ KSRTC ಬಸ್ ನಲ್ಲಿ 3 ವರ್ಷದ ಮಕ್ಕಳಿಗೆ ಇನ್ನು ಮುಂದೆ ಟಿಕೆಟ್ ದರ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಷ್ಟನೆ ನೀಡಿದೆ.

ಮಕ್ಕಳ ಪ್ರಯಾಣ ದರವನ್ನು ಆರು ವರುಷ ಮೇಲ್ಪಟ್ಟವರಿಗೆ ಮಾತ್ರ ವಿಧಿಸಲಾಗುತ್ತಿದೆ ಹೊರತು 3 ವರ್ಷದ ಮಕ್ಕಳಿಗೆ ಟಿಕೆಟ್ ದರವನ್ನು ನಿಗದಿಪಡಿಸಿಲ್ಲ. ಈ ವಿಚಾರವಾಗಿ KSRTCಯು ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರುಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ, 6-12 ವರುಷದೊಳಗಿನ ಮಕ್ಕಳಿಗೆ ಅರ್ಧ ಪ್ರಯಾಣ ದರ, 12 ವರುಷ ಮೇಲ್ಪಟ್ಟ ಮಕ್ಕ ಳಿಗೆ ಪೂರ್ಣ ಪ್ರಯಾಣ ದರವನ್ನು ವಿಧಿಸಲಾಗುತ್ತಿದೆ.

ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳು 4-5 ವರುಷ ಆಗಿದ್ದಾಗ 6 ವರುಷವಾಗಿರುವ ಮಕ್ಕಳಂತೆ, ಅದೇ ರೀತಿ 11-12 ವರುಷದ ಮಕ್ಕಳು 13 ವರುಷದ ಮಕ್ಕಳಂತೆ ಕಾಣುವ ಸಂದರ್ಭಗಳಲ್ಲಿ ಮಕ್ಕಳ ಪೋಷಕರು ಹಾಗೂ ಬಸ್ಸಿನ ಚಾಲನಾ ಸಿಬ್ಬಂದಿಗಳ ನಡುವೆ ಟಿಕೆಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರಯಾಣದರ ವಿಧಿಸುವಾಗ ವಯಸ್ಸಿನ ಜೊತೆಗೆ ಎತ್ತರವನ್ನು ಅಳೆಯಲು ಅಳತೆಗೋಲು ಉಪಯೋಗಿಸುವಂತೆ ಮತ್ತು ವಯಸ್ಸಿನ ಅಧಿಕೃತ ದಾಖಲಾತಿಯನ್ನು ತೋರಿಸುವಂತೆ ಅಕ್ಟೋಬರ್ 2021ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ.

ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೂ ತಿಳುವಳಿಕೆ ನೀಡಲಾಗಿದೆ ಎಂಬುದನ್ನು ಸಾರಿಗೆ ನಿಗಮ ತಿಳಿಸಿದೆ.

- Advertisement -

Related news

error: Content is protected !!