Friday, May 3, 2024
spot_imgspot_img
spot_imgspot_img

ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಈ ಆಹಾರಗಳನ್ನು ಸೇವಿಸಿ

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಅದು ಮೂಲವ್ಯಾಧಿ. ಹೇಳಿಕೊಳ್ಳಲು ಮುಜುಗರಪಡುವ ಈ ಕಾಯಿಲೆಯ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಮೂಲವ್ಯಾಧಿಯಲ್ಲಿ ಕರುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಮಲವಿಸರ್ಜನೆ ವೇಳೆ ರಕ್ತ ಕಾಣಿಸಿಕೊಳ್ಳುತ್ತದೆ. ಅದನ್ನು ಹೊರತುಪಡಿಸಿ, ಗುದದ್ವಾರದಲ್ಲಿ ಚರ್ಮದ ನೋವಿನ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಮಲವಿಸರ್ಜನೆ ವೇಳೆ ಅತೀವ ನೋವನ್ನು ಉಂಟು ಮಾಡುತ್ತದೆ.

ಸಾಮಾನ್ಯವಾಗಿ ಇಡೀ ದಿನ ಕುಳಿತು ಕೆಲಸ ಮಾಡುವವರಲ್ಲಿ, ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ, ಆಲ್ಕೋಹಾಲ್‌ನಂತಹ ವ್ಯಸನಗಳಿಂದ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೂಲವ್ಯಾಧಿಯ ನಿಯಂತ್ರಣವನ್ನು ಆಹಾರದಿಂದಲೇ ಮಾಡಬಹುದಾಗಿದೆ. ಮೂಲವ್ಯಾಧಿಗೆ ಯಾವ ಆಹಾರವನ್ನು ಸೇವಿಸಬೇಕು, ಯಾವ ಆಹಾರವನ್ನು ಸೇವಿಸಬಾರದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

​ರಾಗಿ ಮತ್ತು ಗೋದಿಯ ಆಹಾರ ಬೆಸ್ಟ್‌

ಮೂಲವ್ಯಾಧಿಯ ವೇಳೆ ಕರುಳಿನ ಆರೋಗ್ಯ ಹದಗೆಟ್ಟಿರುತ್ತದೆ. ಹೀಗಾಗಿ ಹೊಟ್ಟೆಯನ್ನು ತಂಪುಗೊಳಿಸಲು ಮತ್ತು ಮಲವಿಸರ್ಜನೆ ವೇಳೆ ಕಷ್ಟವಾಗಬಾರದು ಎಂದರೆ ರಾಗಿ ಮತ್ತು ಗೋದಿಯನ್ನು ಬಳಕೆ ಮಾಡಬೇಕು. ದಿನಕ್ಕೆ 2 ಬಾರಿ ರಾಗಿ ಅಥವಾ ಗೋದಿಯ ಬಳಕೆಯಿದ್ದರೆ ಉತ್ತಮ. ಜೊತೆಗೆ ಅನ್ನದ ಸೇವನೆ ಕಡಿಮೆ ಇರಲಿ. ಅನ್ನದಲ್ಲಿರುವ ಜಿಗುಟಿನ ಅಂಶ ಕೆಲವೊಮ್ಮೆ ಮೂಲವ್ಯಾಧಿಗೆ ತೊಂದರೆಯಾಗಬಹುದು. ರಾಗಿಯ ಗಂಜಿ, ರೊಟ್ಟಿ, ಗೋದಿಯ ಪಾಯಸದಂತಹ ಆಹಾರ ಸೇವಿಸಿ.

​ಬಾಳೆಹಣ್ಣಿನ ಸೇವನೆ

ಬಾಳೆಹಣ್ಣು ಮಲಬದ್ಧತೆಯನ್ನು ಸರಿದೂಗಿಸುವ ಉತ್ತಮ ಆಹಾರವಾಗಿದೆ. ಹೀಗಾಗಿ ಬಾಳೆಹಣ್ಣಿನ ಸೇವನೆ ಉತ್ತಮವಾಗಿದೆ. ಬಾಳೆಹಣ್ಣಿನಲ್ಲಿರುವ ಫೈಬರ್‌ ಅಂಶ ಜೀರ್ಣಶಕ್ತಿಯನ್ನು ಉತ್ತೇಜಿಸಿ, ಕರುಳನ್ನು ತಂಪಾಗಿರಿಸುತ್ತದೆ.

ಹೀಗಾಗಿ ಮೂಲವ್ಯಾಧಿ ಸಮಸ್ಯೆ ಇರುವವರು ಅವಶ್ಯವಾಗಿ ಬಾಳೆಹಣ್ಣುಗಳನ್ನು ಸೇವನೆ ಮಾಡಿ. ಪ್ರತಿದಿನ ಊಟವಾದ ಬಳಿಕ ಬಾಳೆಹಣ್ಣನ್ನು ಸೇವನೆ ಮಾಡುವುದು ಹೆಚ್ಚು ಉತ್ತಮವಾಗಿದೆ. ಚುಕ್ಕಿ ಬಾಳೆಹಣ್ಣು ನಿಮ್ಮ ಆಯ್ಕೆಯಾಗಿರಲಿ.

​ತರಕಾರಿಗಳನ್ನು ತಿನ್ನಿರಿ

ಮೂಲವ್ಯಾಧಿಯನ್ನು ತಡೆಯಲು ಆಹಾರ ಕ್ರಮ ಮುಖ್ಯವಾಗಿರುತ್ತದೆ. ಅದರಲ್ಲೂ ನಾರಿನ ಅಂಶವಿರುವ ತರಕಾರಿಗಳ ಸೇವನೆ ಹೆಚ್ಚಾಗಿರಬೇಕು. ಇದರಿಂದ ಮಲಬದ್ಧತೆಯಂತಹ ಸಮಸ್ಯೆ ಕಾಡುವುದಿಲ್ಲ. ಮೂಲವ್ಯಾಧಿಗೆ ಮುಖ್ಯ ಕಾರಣವೇ ಮಲಬದ್ಧತೆ. ಮಲವಿಸರ್ಜನೆ ಸರಿಯಾಗಿ ಆಗದೆ ಇದ್ದರೆ ಮೂಲವ್ಯಾಧಿ ಕಾಡುತ್ತದೆ.

ಹೀಗಾಗಿ ಊಟದಲ್ಲಿ ಬೇಯಿಸಿದ ಮತ್ತು ಹಸಿ ತರಕಾರಿಗಳ ಸೇವನೆ ಹೆಚ್ಚಾಗಿರಲಿ ಎನ್ನುತ್ತಾರೆ ಡಾ. ಅರುಣಾ. ಅಲ್ಲದೆ ತರಕಾರಿಗಳು ದೇಹದಲ್ಲಿ ಜೀರ್ಣವಾಗಿ ಅನುಪಯುಕ್ತ ವಸ್ತುಗಳನ್ನು ಮಾತ್ರ ದೇಹದಿಂದ ಹೊರಹಾಕಲು ನೆರವಾಗುತ್ತವೆ. ಅದರ ಜೊತೆಗೆ ಸೊಪ್ಪಿನ ಬಳಕೆ ಕೂಡ ಮುಖ್ಯವಾಗಿರುತ್ತದೆ.

​ಹೆಚ್ಚು ನೀರು ಕುಡಿಯಿರಿ

ನೀರು ದೇಹದಲ್ಲಿನ ಎಲ್ಲಾ ಕಲ್ಮಷಗಳನ್ನು ಹೊರಹಾಕಲು ಸಹಾಯಕವಾಗಿದೆ. ಅಲ್ಲದೆ ಕರುಳನ್ನು ಬಿಸಿಯಾಗದಂತೆ ತಡೆಯುತ್ತದೆ. ಹೀಗಾಗಿ ಮೂಲವ್ಯಾಧಿ ಸಮಸ್ಯೆ ಇರುವವರು ಹೆಚ್ಚು ಹೆಚ್ಚು ನೀರನ್ನು ಸೇವಿಸಿ. ಒಂದೇ ಕಡೆ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ. ಇದರಿಂದಲೂ ಮೂಲವ್ಯಾಧಿ ಸಮಸ್ಯೆ ಹೆಚ್ಚಾಗುತ್ತದೆ.

ಪ್ರತಿ ಅರ್ಧ ಗಂಟೆಗೊಮ್ಮೆ ಒಂದೈದು ನಿಮಿಷ ನಡೆದಾಡಿ. ಇದರಿಂದ ಮೂಲವ್ಯಾಧಿ ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ.

​ಆಲೂಗಡ್ಡೆ, ಮಸಾಲೆ ಪದಾರ್ಥಗಳ ಸೇವನೆ ಬೇಡವೇ ಬೇಡ

ಮೂಲವ್ಯಾಧಿ ಸಮಸ್ಯೆ ಇರುವವರು ಆಲೂಗಡ್ಡೆಯನ್ನು ಸೇವಿಸಬಾರದು ಏಕೆಂದರೆ ಇದರಿಂದ ಕೆಲವಮ್ಮೆ ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್ಟ್ರಿಕ್‌, ಮಲಬದ್ಧತೆ ಸಮಸ್ಯೆ ಉಂಟಾಗಬಹುದು.

ಇನ್ನು ಮಸಾಲೆ ಪದಾರ್ಥಗಳನ್ನು ಹಾಗೂ ಕರಿದ ಪದಾರ್ಥ, ಆಲ್ಕೋಹಾಲ್‌ ಸೇವನೆಯನ್ನು ತ್ಯಜಿಸಿದರೆ ಒಳ್ಳೆಯದು. ಏಕೆಂದರೆ ಇದರಿಂದ ಮಲವಿಸರ್ಜನೆ ವೇಳೆ ತೊಂದರೆಯಾದೀತು. ಅಲ್ಲದೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಮಲದಲ್ಲಿ ರಕ್ತಸ್ರಾವ, ಅತೀವ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮೂಲವ್ಯಾಧಿ ಸಮಸ್ಯೆ ಇರುವವರು ಇಂತಹ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.

- Advertisement -

Related news

error: Content is protected !!